





ಆಲಂಕಾರು: ಪೆರಾಬೆ ಗ್ರಾಮದ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನ.24ರಿಂದ ನ.26ರ ತನಕ ಚೌತಿ,ಪಂಚಮಿ,ಷಷ್ಠಿ ಉತ್ಸವ ನಡೆಯಲಿದೆ.



ನ.24ರಂದು ಬೆಳಿಗ್ಗೆ 8:00 ರಿಂದ ಚೌತಿ ಉತ್ಸವ, ಗಣಪತಿ ಹೋಮ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ,ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ಸುರುಳಿ, ಶ್ರೀ ದುರ್ಗಾ ಭಜನಾ ಮಂಡಳಿ ಕುಂತೂರುಪದವು ರಾಮಡ್ಕ ಇವರಿಂದ ಭಜನೆ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ರಾತ್ರಿ 7:00ರಿಂದ ವಿಶ್ವಮೋಹನ ನೃತ್ಯ ಕಲಾಶಾಲೆ ಕಡಬ ವಿದೂಷಿ ಮಾನಸ ಪುನೀತ್ ರೈ ಮನವಳಿಕೆ ಯವರಿಂದ ನೃತ್ಯೋಲ್ಲಾಸ ಕಾರ್ಯಕ್ರಮ ರಾತ್ರಿ ರಂಗಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.





ನ.25 ರಂದು ಬೆಳಿಗ್ಗೆ ಪಂಚಮಿ ಉತ್ಸವ ಕ್ಷೀರಾಭಿಷೇಕ,ಪಂಚಾಮೃತಾಭಿಷೇಕ,ಸರ್ವಸೇವೆ,ನಾಗಾರಾಧನೆ, ಶ್ರೀ ದುರ್ಗಾಶಕ್ತಿ ಭಜನಾ ಮಂಡಳಿ ಆಲಂಕಾರು, ಶ್ರೀ ಶಾರದಾ ಭಜನಾ ಮಂಡಳಿ ಕುಂತೂರು ಇವರಿಂದ ಭಜನೆ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ಬ್ರಹ್ಮಶ್ರೀ ವೇ.ಮೂ ಪುರೋಹಿತ ನಾಗರಾಜ್ ಭಟ್ ಸುಳ್ಯ,ಬ್ರಹ್ಮಶ್ರೀ ಸುಬ್ರಹ್ಮಣ್ಯ ಕಾರಂತ ಸುರತ್ಕಲ್ ಇವರ ನೇತೃತ್ವದಲ್ಲಿ ಸಾಮೂಹಿಕ ಆಶ್ಲೇಷ ಬಲಿ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ನ.26 ರಂದು ಷಷ್ಠಿ ಉತ್ಸವ ಕ್ಷೀರಾಭಿಷೇಕ,ಪಂಚಾಮೃತಾಭಿಷೇಕ, ನವಕಲಶಾಭಿಷೇಕ,ಸರ್ವಸೇವೆ, ಮಂತ್ರಾಕ್ಷತೆ,ಬ್ರಾಹ್ಮಣ ಸುಹಾಸಿನಿ ಆರಾದನೆ,ಮಾಸಿಕ ಗಣಪತಿ ಹೋಮ, ಶ್ರೀ ಪಾಂಡುರಂಗ ಭಜನಾಮಂಡಳಿ ಮನವಳಿಕೆ ಯವರಿಂದ ಭಜನೆ, ಧಾರ್ಮಿಕ ಸಭೆ ಹಿಂದೂ ಧಾರ್ಮಿಕ ಮುಖಂಡರು ಕುಂಟಾರು ರವೀಶ್ ತಂತ್ರಿಗಳು ಪ್ರವಚನ,ದೇವಾಲಯ ಸಂವರ್ಧನ ಸಮಿತಿ ಮಂಗಳೂರು ಇದರ ವಿಭಾಗ ಪ್ರಮುಖರು ಕೇಶವ ಪ್ರಸಾದ್ ಮುಳಿಯ ಭಾಗವಹಿಸಲಿದ್ದು ಖ್ಯಾತ ಜ್ಯೋತಿಷ್ಯರು ಶ್ರೀಧರ ಬಲ್ಯಾಯ ರವರಿಗೆ ಸನ್ಮಾನ ನಡೆಯಲಿದೆ.
ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ
ಸಂಜೆ ಭಜನಾಮೃತ ಭಜನಾ ತಂಡ ಕಡಬ ಇವರಿಂದ ಕುಣಿತ ಭಜನೆ, ರಾತ್ರಿ ರಂಗಪೂಜೆ, ಮಾಸಿಕ ದುರ್ಗಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಒಳಾಂಗಣ ಮತ್ತು ಹೊರಾಂಗಣ ಮೇಲ್ಛಾವಣಿ ನಿರ್ಮಾಣ ನವೀಕರಣ ಪ್ರಯುಕ್ತ ಶ್ರೀ ದೇವರಿಗೆ ಶುದ್ದಿ ಕಲಶಾಭಿಷೇಕ ನ.22ರಂದು ಸಂಜೆ ದೇವತಾ ಪ್ರಾರ್ಥನೆ,ಪ್ರಾಸಾದ ಶುದ್ದಿ,ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ನ.23ರಂದು ಆದಿತ್ಯವಾರ ಬೆಳಿಗ್ಗೆ ಶ್ರೀ ಬಾಲಸುಬ್ರಹ್ಮಣ್ಯ ದೇವರಿಗೆ ಪಂಚವಿಂಶತಿ ಕಲಶ,ಪ್ರದಾನ ಹೋಮ,ಗಣಪತಿ ಹೋಮ ನಡೆಯಲಿದೆ. ಈ ಎಲ್ಲಾ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿ, ಶ್ರೀ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಖಾಯಂ ಟ್ರಸ್ಟಿ ಯಂ. ರಾಮಮೋಹನ್ ರೈ ಸುರುಳಿ,ಅಧ್ಯಕ್ಷರಾದ ಯಂ.ಕೃಷ್ಣಕುಮಾರ ಅತ್ರಿಜಾಲು, ಉಪಾಧ್ಯಕ್ಷ ರಾದ ರಾಧಾಕೃಷ್ಣ ರೈ ಪರಾರಿಗುತ್ತು,ಕಾರ್ಯದರ್ಶಿ ಸತೀಶ್ ಪೂಂಜಾ,ಕೋಶಾಧಿಕಾರಿ ಸಂತೋಷ ರಾವ್ ಕುಂಞಕ್ಕು,ಕಾರ್ಯದರ್ಶಿ ಸತೀಶ್ ಪೂಂಜ, ಜತೆ ಕಾರ್ಯದರ್ಶಿ ವಿನೋದ್ ಕುಮಾರ್ ರೈ,ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾದ ಪ್ರಶಾಂತ ರೈ ಮನವಳಿಕೆ,ಕಾರ್ಯದರ್ಶಿ ಹೇಮಚಂದ್ರ ಸುರುಳಿ, ನಿತ್ಯಪೂಜಾ ಸಮಿತಿಯ ಅಧ್ಯಕ್ಷರಾದ ಗಂಗಾಧರ ಪೂಜಾರಿ ಕಲ್ಲಡ್ಕ, ಸಾಂಸ್ಕೃತಿಕ ಕಲಾ ವೇದಿಕೆಯ ಪ್ರದೀಪ್ ರೈ ಮನವಳಿಕೆ,ನಿರ್ಮಾಣ ಸಮಿತಿ ಸಂಚಾಲಕ ರಾಮಣ್ಣ ಗೌಡ ಸುರುಳಿ, ಹಾಗು ಪದಾಧಿಕಾರಿಗಳು ಮತ್ತು ಸದಸ್ಯರು ,ಅರ್ಚಕರು, ಸಿಬ್ಬಂದಿ ವರ್ಗದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








