





ಪುತ್ತೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ದ.ಕ ಜಿಲ್ಲೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನ.17ರಂದು ಬಜ್ಪೆ ಸಂತ ಜೋಸೆಫರ ಪ.ಪೂ.ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕ್ರೀಡಾಕೂಟ 2025- 26 ಬಾಕ್ಸಿಂಗ್ ಪಂದ್ಯಾಟದಲ್ಲಿ ಸಂತ ಫಿಲೋಮಿನಾ ಪ.ಪೂ.ಕಾಲೇಜಿನ ಪ್ರಥಮ ಕಲಾ ವಿಭಾಗದ ಇಬ್ರಾಹಿಂ ಫಝಲ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.



ಇವರು ವಿಟ್ಲದ ಅಳಿಕೆ ನಿವಾಸಿ ಅಬ್ದುಲ್ಲ ಹಾಗೂ ಸೆಕೀನಾ ದಂಪತಿಗಳ ಪುತ್ರ.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.










