





ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು, ಅಬ್ಬಕ್ಕ ರಾಣಿ ಗೈಡ್ಸ್ ದಳ ಕಬಕ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕ,ತುಳು ಅಪ್ಪೆಕೂಟ ಪುತ್ತೂರು ಸಹಯೋಗದಲ್ಲಿ ಸರಕಾರಿ ಪ್ರೌಢಶಾಲೆ ಕಬಕದ ಆಶ್ರಯದಲ್ಲಿ ಪೋಷಕರಿಗೆ ಅರಿವು ಕಾರ್ಯಕ್ರಮ ಕಬಕ ಸರಕಾರಿ ಪ್ರೌಢಶಾಲೆಯಲ್ಲಿ ನ.14ರಂದು ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಹೈದರ್ ರವರು ವಹಿಸಿದ್ದರು.ಮುಖ್ಯ ಶಿಕ್ಷಕಿ ಸುರೇಖ ಕಾರ್ಯಕ್ರಮ ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರಿನ ವಕೀಲರು, ತುಳು ಅಪ್ಪೆಕೂಟದ ಅಧ್ಯಕ್ಷರಾದ ಹರಿಣಾಕ್ಷಿ ಜೆ ಶೆಟ್ಟಿ ಮಕ್ಕಳ ರಕ್ಷಣಾ ನೀತಿ,ಪೋಕ್ಸೋ ಕಾಯಿದೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.






ಲಯನ್ ಅಧ್ಯಕ್ಷರಾದ ಪ್ರೇಮಲತಾ ರಾವ್ ಬಾಲ್ಯ ವಿವಾಹ ನಿಷೇಧ ಮತ್ತು ಬಾಲಕಾರ್ಮಿಕ ನಿಷೇಧ ನೀತಿಗಳ ಬಗ್ಗೆ ಮಾಹಿತಿ ನೀಡಿದರು.ಮುಖ್ಯ ಅತಿಥಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಜಿಲ್ಲೆ 317Dಇದರ ಜಿಲ್ಲಾ ಸಂಪರ್ಕಾಧಿಕಾರಿ ವಿ.ಎನ್.ಸುದರ್ಶನ್ ಪಡಿಯಾರ್ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.
ಅತಿಥಿಗಳಾದ ಲಯನ್ಸ್ ತ್ರಿವೇಣಿ ಪೆರುವೋಡಿ,ಎಸ್.ಡಿ.ಎಂ.ಸಿ.ಸ್ಥಳೀಯ ಪ್ರತಿನಿಧಿ ಶಾಭಾ.ಕೆ,ಸ್ಥಾಯಿ ಸಮಿತಿ ಸದಸ್ಯ ಅಬ್ದುಲ್ ಖಾದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಎಸ್.ಡಿ.ಎಂ.ಸಿ.ಸದಸ್ಯರು ಪೋಷಕರು ಭಾಗವಹಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ವಂದಿಸಿದರು.ಶಿಕ್ಷಕರಾದ ಯಶೋಧ,ಸ್ವಪ್ನ ಕೆ ,ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ಅಮರೇಶ್ ಭವ್ಯ ಸಹಕರಿಸಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷೆ ಗೈಡ್ಸ್ ಶಿಕ್ಷಕಿ ಶಾಂತಾ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.








