






ಪುತ್ತೂರು: ಬೆಟ್ಟಂಪಾಡಿ ನವೋದಯ ಪ್ರೌಢ ಶಾಲೆಯ ವಾರ್ಷಿಕ ಕ್ರೀಡಾಕೂಟ ಬಿಲ್ವಗಿರಿ ನವೋದಯ ಕ್ರೀಡಾಂಗಣದಲ್ಲಿ ನ. 20 ರಂದು ನಡೆಯಿತು.


ಇರ್ದೆ ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ರೈ ಚೆಲ್ಯಡ್ಕ ಇವರು ಕ್ರೀಡಾಜ್ಯೋತಿಯನ್ನು ಬೆಳಗುವುದರ ಮೂಲಕ ಉದ್ಘಾಟಿಸಿದರು. ಹಿರಿಯ ವಿದ್ಯಾರ್ಥಿ, ಸಿವಿಲ್ ಇಂಜಿನಿಯರ್ ಮತ್ತು ಕಾಂಟ್ರಾಕ್ಟರ್ ಬೆಟ್ಟಂಪಾಡಿಯ ನವೀನ್ ತಲೆಪಾಡಿ ಧ್ವಜಾರೋಹಣವನ್ನು ನೆರವೇರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಾಲಾ ಅಭಿವೃದ್ಧಿ ನಿಧಿಗೆ 10,000ರೂ ಧನ ಸಹಾಯವನ್ನು ನವೋದಯ ಎಜುಕೇಶನ್ ಸೊಸೈಟಿ (ರಿ )ಯ ಕಾರ್ಯದರ್ಶಿಗಳಿಗೆ ಹತ್ತಾಂತರಿಸಿದರು.






ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಂಜದ ನಿವೃತ್ತ ಮುಖ್ಯ ಗುರು, ಪಾಟಳಿ ಕುಕ್ಕುಪುಣಿ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ಕ್ರೀಡಾಪಟುಗಳ ಪಥಸಂಚಲನಕ್ಕೆ ಗೌರವ ವಂದನೆ ಸ್ವೀಕರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸುದೆನಡ್ಕ ಮಹೇಶ್ ಭಟ್, ರಾಷ್ಟ್ರಮಟ್ಟದ ಕ್ರೀಡಾಪಟುವಾಗಿದ್ದ ಶಾಲಾ ಹಿರಿಯ ವಿದ್ಯಾರ್ಥಿನಿ ಪ್ರೇಮಲತಾ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಶೇಷಪ್ಪ ನಾಯ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಪುಷ್ಪರಾದ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರಹಾಸ ಮುರೂರು ಪ್ರಾಸ್ತಾವಿಕ ಮಾತುಗಳ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ರೈ ಅಧ್ಯಕ್ಷತೆಯನ್ನು ವಹಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮುಖ್ಯ ಗುರು ಪುಷ್ಪಾವತಿ ಎಸ್ ಸ್ವಾಗತಿಸಿದರು. ಅಧ್ಯಾಪಕ ಬಂಧುಗಳು, ಪೋಷಕರು,ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿಗಳು, ಅಡುಗೆ ಸಹಾಯಕರು ಸಹಕರಿಸಿದರು.
ಶಿಕ್ಷಕರಾದ ರಾಧಾಕೃಷ್ಣ ಆರ್ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ. ಪಿ. ವಂದಿಸಿದರು.







