ಜೆಸಿಐ ಕೊಕ್ಕಡ ಕಪಿಲಾ: ಅಧ್ಯಕ್ಷ; ರಿತೇಶ್ ಎಂ.ಸ್ಟ್ರೆಲ್ಲಾ, ಕಾರ್ಯದರ್ಶಿ; ಜೋಯೆಲ್ ಪಿರೇರಾ

0

ನೆಲ್ಯಾಡಿ: ಜೆಸಿಐ ಕೊಕ್ಕಡ ಕಪಿಲಾ ಘಟಕದ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ರಿತೇಶ್ ಎಂ. ಸ್ಟ್ರೆಲ್ಲಾ ಹಾಗೂ ಕಾರ್ಯದರ್ಶಿಯಾಗಿ ಕೊಕ್ಕಡ ಗ್ರಾಮದ ಮರಿಯಾಕೃಪಾ ನಿವಾಸಿ ಜೋಯೆಲ್ ಪಿರೇರಾ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಿತೇಶ್ ಎಂ.ಸ್ಟ್ರೆಲ್ಲಾ ಅವರು ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಒಡ್ರಲ್ಕೆ ನಿವಾಸಿ. ಸಮಾಜ ಸೇವಾ ಕ್ಷೇತ್ರದಲ್ಲಿ ಪದವೀಧರರಾಗಿದ್ದು ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಊರಿನಲ್ಲಿ ಪ್ರಗತಿ ಪರ ಕೃಷಿಕರಾಗಿದ್ದಾರೆ. ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಜೋಯೆಲ್ ಪಿರೇರಾ ಅವರು ಸಿವಿಲ್ ಎಂಜಿನಿಯರ್ ಪದವೀಧರರಾಗಿದ್ದು ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.


ಶಿಬರಾಜೆ ಪಾದೆ ಗ್ರಾಮಾಭ್ಯುದಯ ಅನುಷ್ಠಾನ ಸಮಿತಿಯ ಕಚೇರಿಯಲ್ಲಿ ಡಾ. ಶೋಭಾ ಪಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಜೆಸಿಐ ಸರ್ವ ಸದಸ್ಯರ ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಾಮಿನೇಶನ್ ಕಮಿಟಿಯ ಮುಖ್ಯಸ್ಥರಾದ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಜೈನ್ ಚುನಾವಣೆ ನಡೆಸಿಕೊಟ್ಟರು. ಕಾರ್ಯದರ್ಶಿ, ಪೂರ್ವ ಅಧ್ಯಕ್ಷರು, ಸದಸ್ಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here