





ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ರಂಗಪೂಜೆ ನಾಳೆ ಸಾಮೂಹಿಕ ಆಶ್ಲೇಷ ಬಲಿ


ಆಲಂಕಾರು: ಪೆರಾಬೆ ಗ್ರಾಮದ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನ.24 ರಿಂದ ನ.26ರ ತನಕ ಚೌತಿ,ಪಂಚಮಿ,ಷಷ್ಠಿ ಉತ್ಸವ ನಡೆಯಲಿದೆ.






ನ.24 ರಂದು ಬೆಳಿಗ್ಗೆ 8:00 ರಿಂದ ಚೌತಿ ಉತ್ಸವ, ಗಣಪತಿ ಹೋಮ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ಸುರುಳಿ, ಶ್ರೀ ದುರ್ಗಾ ಭಜನಾ ಮಂಡಳಿ ಕುಂತೂರುಪದವು ರಾಮಡ್ಕ ಇವರಿಂದ ಭಜನೆ ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ 7:00 ರಿಂದ ವಿಶ್ವಮೋಹನ ನೃತ್ಯ ಕಲಾಶಾಲೆ ಕಡಬ ವಿದೂಷಿ ಮಾನಸ ಪುನೀತ್ ರೈ ಮನವಳಿಕೆಯವರಿಂದ ನೃತ್ಯೋಲ್ಲಾಸ ಕಾರ್ಯಕ್ರಮ ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಇಂದು ನ.25 ರಂದು ಬೆಳಿಗ್ಗೆ ಪಂಚಮಿ ಉತ್ಸವ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸರ್ವಸೇವೆ, ನಾಗಾರಾಧನೆ, ಶ್ರೀ ದುರ್ಗಾಶಕ್ತಿ ಭಜನಾ ಮಂಡಳಿ ಆಲಂಕಾರು, ಶ್ರೀ ಶಾರದಾ ಭಜನಾ ಮಂಡಳಿ ಕುಂತೂರು ಇವರಿಂದ ಭಜನೆ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ಬ್ರಹ್ಮಶ್ರೀ ವೇ ಮೂ ಪುರೋಹಿತ ನಾಗರಾಜ್ ಭಟ್ ಸುಳ್ಯ, ಬ್ರಹ್ಮಶ್ರೀ ಸುಬ್ರಹ್ಮಣ್ಯ ಕಾರಂತ ಸುರತ್ಕಲ್ ಇವರ ನೇತೃತ್ವದಲ್ಲಿ ಸಾಮೂಹಿಕ ಆಶ್ಲೇಷ ಬಲಿ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.











