





ನೆಲ್ಯಾಡಿ: ಮಾದೇರಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಬಾಲಮೇಳ ಮತ್ತು ಸ್ತ್ರೀಶಕ್ತಿ ಸಂಘದ ವಾರ್ಷಿಕೋತ್ಸವ ನಡೆಯಿತು.



ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಶುಭ ಹಾರೈಸಿದರು. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್ ಕೆ., ನೆಲ್ಯಾಡಿ ಗ್ರಾ.ಪಂ.ಸದಸ್ಯ ಆನಂದ ಪಿಲವೂರು, ಪುಚ್ಚೇರಿ ಶಾಲಾ ಶಿಕ್ಷಕ ಪುರಂದರ ಗೌಡ ಡೆಂಜ ಸಂದರ್ಭೋಚಿತವಾಗಿ ಮಾತನಾಡಿದರು. ಅಂಗನವಾಡಿ ವಲಯ ಮೇಲ್ವಿಚಾರಕಿ ನಾಗವೇಣಿ, ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷೆ ರೇಷ್ಮಾಶಶಿ, ಸದಸ್ಯೆ ಚೇತನಾ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಭವ್ಯ, ಗೊಂಚಲು ಕಾರ್ಯದರ್ಶಿ ಯೋಗಿನಿ, ಪುಚ್ಚೇರಿ ಶಾಲಾ ನಿವೃತ್ತ ಮುಖ್ಯಗುರು ಪದ್ಮನಾಭ ಪಿ., ಮಾದೇರಿ ಅಂಗನವಾಡಿ ಕೇಂದ್ರದ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ದಿಕ್ಷೀತ್ ಡಿ.ಎ. ವೇದಿಕೆಯಲ್ಲಿ ಉಪಸ್ಥಿತರಿದ್ದರು.






ಸನ್ಮಾನ/ಬಹುಮಾನ ವಿತರಣೆ;
ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯಗುರು ಪದ್ಮನಾಭ ಪಿ. ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಂಗನವಾಡಿ ಕೇಂದ್ರದ ಹಳೆ ವಿದ್ಯಾರ್ಥಿಗಳು, ಪೋಷಕರು ಅಂಗನವಾಡಿ ಕಾರ್ಯಕರ್ತೆ ಜಯಂತಿ ಬಿ., ಹಾಗೂ ಸಹಾಯಕಿ ಪಾರ್ವತಿ ಅವರನ್ನು ಸನ್ಮಾನಿಸಿದರು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಬಹುಮಾನ ವಿಜೇತರ ಪಟ್ಟಿಯನ್ನು ದಿವ್ಯ, ಜಯಂತಿ ಬಿ.ವಾಚಿಸಿದರು. ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಸ್ಮಿತಾ ಸೆಬಾಸ್ಟಿಯನ್ ಪಿ.ಜೆ.ಅವರು ಅಂಗನವಾಡಿಗೆ 25 ಚಯರ್ಗಳನ್ನು ಕೊಡುಗೆಯಾಗಿ ಹಸ್ತಾಂತರಿಸಿದರು.

ಅಂಗನವಾಡಿ ಕಾರ್ಯಕರ್ತೆ ಜಯಂತಿ ಬಿ. ವರದಿ ವಾಚಿಸಿದರು. ಯಶ್ವಿನಿ ಸ್ವಾಗತಿಸಿದರು. ಸುಜಾತ ಉರ್ಮಾನು ವಂದಿಸಿದರು. ಸುರೇಶ್ ಪಡಿಪಂಡ, ರಕ್ಷಿತ್ ತೋಟ ನಿರೂಪಿಸಿದರು. ಅಂಗನವಾಡಿ ಪುಟಾಣಿಗಳು ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಪುಟಾಣಿಗಳು, ಮಕ್ಕಳ ಪೋಷಕರಿಂದ, ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಹಳೆ ವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಸಹಾಯಕಿ ಪಾರ್ವತಿ ಸಹಕರಿಸಿದರು.











