






ಪುತ್ತೂರು: ಕ್ಯಾಂಪ್ಕೊ ಆಡಳಿತ ಮಂಡಳಿಯ ಆರು ಸ್ಥಾನಗಳಿಗೆ ನ.23ರಂದು ಚುನಾವಣೆ ನಡೆದಿದ್ದು, ಇಂದು ಮತ ಏಣಿಕೆ ಪ್ರಕ್ರಿಯೆ ನಡೆಯಿತು.


ಸಹಕಾರ ಭಾರತಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಎಸ್ ಆರ್ ಸತೀಶ್ಚಂದ್ರ, ದಯಾನಂದ ಹೆಗ್ಡೆ, ಮಹೇಶ್ ಚೌಟ, ಪುರುಷೋತ್ತಮ್ ಭಟ್, ಎ.ವಿ ತೀರ್ಥರಾಮ, ಮುರಳಿಕೃಷ್ಣ ಚಳ್ಳಂಗಾರು ಜಯಗಳಿಸಿದ್ದಾರೆ.



ಈಗಾಗಲೇ ಕೇರಳ ರಾಜ್ಯದಿಂದ 9 ಜನ ಅವಿರೋಧ ಆಯ್ಕೆಯಾಗಿದ್ದು, ಕರ್ನಾಟಕದಿಂದ ಹತ್ತು ಸ್ಥಾನಗಳ ಪೈಕಿ ಆರು ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಚಲಾವಣೆ ಆದ ಮತಗಳು 2575
ಆಸಿಂಧು ಮತಗಳು 33
ಅಭ್ಯರ್ಥಿ ಗಳು ಪಡೆದ ಮತಗಳು
ದಯಾನಂದ ಹೆಗ್ಡೆ-2163
ಮಹೇಶ್ ಚೌಟ-2216
ಮುರಳಿ ಕೃಷ್ಣ- 2261
ಪುರುಷೋತ್ತಮ ಭಟ್- 2249
ಸತೀಶ್ಚಂದ್ರ – 2181
ತೀರ್ಥರಾಮ-2052
ರಾಮ್ ಪ್ರತೀಕ್- 634
ಸತ್ಯ ನಾರಾಯಣ-620










