





ಉಪ್ಪಿನಂಗಡಿ: ಇಲ್ಲಿನ ಮಹಾಕಾಳಿ ದೇವಸ್ಥಾನವನ್ನು ಕೇಂದ್ರೀಕರಿಸಿ ಕಾರ್ಯನಿರ್ವಹಿಸುವ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ 62ನೇ ವರ್ಷದ ನಗರ ಭಜನಾ ಮಹೋತ್ಸವವು ಚಾಲನೆ ಪಡೆದಿದೆ.


ಪ್ರತಿನಿತ್ಯ ರಾತ್ರಿ ಉಪ್ಪಿನಂಗಡಿಯ ಪ್ರಮುಖ ಬೀದಿಯಲ್ಲಿ ನಗರ ಭಜನಾ ಸಂಕೀರ್ತನೆಯೊಂದಿಗೆ ಸಾಗಿ ದೇವಾಲಯಕ್ಕೆ ಬರುವ ಭಕ್ತಾದಿಗಳು ಅಲ್ಲಿ ಮಹಾಪೂಜೆ, ದೊಡ್ಡ ಬೂಳ್ಯ ಸೇವೆಯಲ್ಲಿ ಭಾಗವಹಿಸುತ್ತಾರೆ.





ನಗರ ಭಜನೆಯಲ್ಲಿ ಮಂಡಳಿಯ ಅಧ್ಯಕ್ಷ ಶರತ್ ಕೋಟೆ, ಪ್ರಧಾನ ಕಾರ್ಯದರ್ಶಿ ಮಾಧವ ಆಚಾರ್ಯ, ಪ್ರಮುಖರಾದ ಐ. ಪುರುಷೋತ್ತಮ ನಾಯಕ್, ಐ. ಚಿದಾನಂದ ನಾಯಕ್, ಎನ್. ಗೋಪಾಲ ಹೆಗ್ಡೆ, ಚಂದ್ರಹಾಸ ಹೆಗ್ಡೆ, ಕಂಗ್ವೆ ವಿಶ್ವನಾಥ ಶೆಟ್ಟಿ, ಪ್ರಶಾಂತ್ ನೆಕ್ಕಿಲಾಡಿ, ನಿತೇಶ್ ಗಾಣಿಗ, ಸುಂದರ ಮೂಲ್ಯ, ಕೃಷ್ಣ ಕೋಟೆ, ಪ್ರಸನ್ನ ಪೆರಿಯಡ್ಕ, ರಾಜೇಶ್ ಕುಕ್ಕೇಶ್ರಿ, ಜಯಪ್ರಕಾಶ್ ಶೆಟ್ಟಿ, ಸುಧಾಕರ ಶೆಟ್ಟಿ, ಗಂಗಾಧರ ಟೈಲರ್, ಹರೀಶ್ ಭಂಡಾರಿ, ಹರಿರಾಮಚಂದ್ರ, ಕೀರ್ತನ್ ಕುಮಾರ್ , ಪುಷ್ಪಾಕರ್ ನಾಯಕ್ , ವಿನೋದ್ ಕುಮಾರ್, ಕೆ. ಜಗದೀಶ್ ಶೆಟ್ಟಿ, ಅಶೋಕ್ ರೈ , ಐ. ಕೇಶವ ನಾಯಕ್ ಮೊದಲಾದವರು ಭಾಗವಹಿಸಿದ್ದರು.









