





ಪುತ್ತೂರು: ದರ್ಬೆತ್ತಡ್ಕ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕುಂಬ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲಾರಂಜಿತ -2025ರಲ್ಲಿ ದರ್ಬೆತ್ತಡ್ಕ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಾಲ್ಕು ಪ್ರಥಮಗಳೊಂದಿಗೆ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ಹಿರಿಯರ ವಿಭಾಗದಲ್ಲಿ ತೇಜಸ್ ಎಲ್ ಕೆ ದೇಶಭಕ್ತಿ ಗೀತೆ ಹಾಗೂ ಭಕ್ತಿಗೀತೆ, ಜಲಜಾಕ್ಷಿ ಹಿಂದಿ ಕಂಠಪಾಠ ಮತ್ತು ಕಿರಿಯರ ವಿಭಾಗದಲ್ಲಿ ಶ್ರದ್ಧಾ ಡಿ ಅಭಿನಯ ಗೀತೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಿರಿಯರ ವಿಭಾಗದಲ್ಲಿ ಕೃತಿಕಾ ಅಶುಭಾಷಣ, ತೇಜಸ್ ನಾಯ್ಕ್ ಮಿಮಿಕ್ರಿ ಹಾಗೂ ಪ್ರಜ್ವಲ್ ಚಿತ್ರಕಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.





ಕಿರಿಯರ ವಿಭಾಗದಲ್ಲಿ ಜಸ್ವಿನ್ ಆರ್ ಹೆಚ್ ಭಕ್ತಿಗೀತೆ, ಶ್ರದ್ಧಾ ಡಿ ಛದ್ಮವೇಷ ಹಾಗೂ ಆರಾಧನಾ ಡಿ ಧಾರ್ಮಿಕ ಪಠಣ ಮತ್ತು ಹಿರಿಯರ ವಿಭಾಗದಲ್ಲಿ ಆರುಶ್ ಜಿ ಕೆ ಧಾರ್ಮಿಕ ಪಠಣದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಅಧ್ಯಾಪಕ ವೃಂದದವರ ಮಾರ್ಗದರ್ಶನ ಹಾಗೂ ಪೋಷಕರ ಪ್ರೋತ್ಸಾಹದಲ್ಲಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿರುತ್ತಾರೆ.









