





ಪುತ್ತೂರು: ಮುಡಿಪು BIT ವಿದ್ಯಾಸಂಸ್ಥೆಯಲ್ಲಿ ಜರುಗಿದ ಉತ್ಕರ್ಷ-2025 ಅಂತರ್ ಜಿಲ್ಲಾ ಮಟ್ಟದ ವಿವಿಧ ವಿಜ್ಞಾನ ಸ್ಪರ್ಧೆಗಳಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲಾ ವಿದ್ಯಾರ್ಥಿನಿಯರು ವಿಜೇತರಾಗಿ ಶಾಲೆಗೆ ಸಮಗ್ರ ಪ್ರಶಸ್ತಿ ಲಭಿಸಿದೆ.



ವಿಜ್ಞಾನ ರಂಗೋಲಿ ಸ್ಪರ್ಧೆಯಲ್ಲಿ ಮಾನ್ಯತಾ ಎ. ಹಾಗೂ ಕು.ಸಿಯಾ ಸುಧೀರ್ ತಂಡ ಪ್ರಥಮ ಸ್ಥಾನ, ಸ್ಟಿಲ್ ಮಾಡೆಲ್ ಸ್ಪರ್ಧೆಯಲ್ಲಿ ನಿಧಿ ಟಿ, ನಝಿಹ ಪಿ., ವಿನಿಶಾ ಡಿಕುನ್ಹಾ, ಆಶ್ರಿತಾ ಆರ್ ಎಚ್. ಕೆ. ತಂಡ ದ್ವೀತಿಯ ಸ್ಥಾನ, ಲಿಟ್ ಮೈಂಡ್ಸ್ ಅಡ್ವೆಂಚರ್‌ನಲ್ಲಿ ಸೌಜನ್ಯ, ರಿಶಿಟ ಗ್ರೀಷ್ಮಾ ಡಿಸೋಜ, ಎ.ಜಿ ಕೃತಿಕಾ, ಮಾನ್ಯ, ವೈಷ್ಣವಿ ಕೆ., ಪ್ರತ್ಯಕ್ಷ ಸಿ. ಹೆಚ್, ರಝೀನಾ, ಸಾನ್ವಿ ಸಿ.ಎಸ್. ತಂಡ ದ್ವೀತಿಯ ಸ್ಥಾನ ಪಡೆದುಕೊಂಡಿದೆ. ಈ ಸ್ಪರ್ಧೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಶಾಲೆಗಳು ಭಾಗವಹಿಸಿದ್ದವು.












