






ಪುತ್ತೂರು:ಬೈಕ್ ಮತ್ತು ಆಟೋ ರಿಕ್ಷಾವೊಂದರ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರರು ತೀವ್ರ ಗಾಯಗೊಂಡಿರುವ ಘಟನೆ ಮಾಡ್ನೂರು ಗ್ರಾಮದಲ್ಲಿ ನ.26ರಂದು ಸಂಜೆ ನಡೆದಿದೆ.


ಕಾವು ಬಂಗ್ಲೆಗುಡ್ಡೆ ನಿವಾಸಿ ಸುಂದರ ಎಂಬವರ ಮಗ ಪವಿತ್ರ ಕುಮಾರ್ ಹಾಗೂ ಮಾಡ್ನೂರಿನ ಶಿವಪ್ಪ ಎಂಬವರ ಮಗ ಸುಪ್ರೀತ್ ಗಾಯಗೊಂಡವರು.




ಅವರು ಕೆಲಸ ಮುಗಿಸಿ ಬೈಕ್ನಲ್ಲಿ ಈಶ್ವರಮಂಗಲ ಕಡೆಯಿಂದ ಕಾವು ಕಡೆಗೆ ಬರುತ್ತಿದ್ದಾಗ ಸುಳ್ಯದಿಂದ ಈಶ್ವರಮಂಗಲ ಕಡೆಗೆ ತೆರಳುತ್ತಿದ್ದ ರಿಕ್ಷಾ ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದೆ.
ಗಾಯಗೊಂಡಿರುವ ಬೈಕ್ ಸವಾರರಿಬ್ಬರನ್ನೂ ಪುತ್ತೂರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ, ತೀವ್ರ ಗಾಯಗೊಂಡಿದ್ದ ಸುಪ್ರೀತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಪವಿತ್ರ ಕುಮಾರ್ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.










