





ಪುತ್ತೂರು: ಜಿಲ್ಲೆಯ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು ಇದೀಗ 60ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದ್ದು, ಅಂತರಾಷ್ಟ್ರೀಯ ರೋಟರಿ ಫೌಂಡೇಶನ್ನ ಗ್ಲೋಬಲ್ ಗ್ರ್ಯಾಂಟ್ ಪ್ರಾಜೆಕ್ಟ್ ಆಗಿರುವ ರೋಟರಿ ಮ್ಯಾಮೋಗ್ರಾಫಿ ಸೆಂಟರ್ ( ಸ್ತನ ಕ್ಯಾನ್ಸರ್ ಅಥವಾ ಗೆಡ್ಡೆ ಪತ್ತೆ ಹಚ್ಚುವಿಕೆ ಕೇಂದ್ರ) ನ.28ರಂದು ಬೊಳುವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಡಾ. ಶ್ರೀಪ್ರಕಾಶ್ ಬಿ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ರೋಗದ ಚಿಕಿತ್ಸೆಗಾಗಿ ಮ್ಯಾಮೋಗ್ರಾಫಿ ಸೆಂಟರ್ನಲ್ಲಿ ಪರೀಕ್ಷೆ ಮತ್ತು ನಿರ್ಣಾಯಕ ಪಾತ್ರ ವಹಿಸಲಿದೆ. ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ 5ರ ರೋಟರಿ ಕ್ಲಬ್ ಪುತ್ತೂರು ಮತ್ತು ಜಿಲ್ಲೆ 6540, ರೋಟರಿ ಕ್ಷೇರ್ರ್ವಿಲೇ, ಯು.ಎಸ್.ಎ ಇವುಗಳ ಜಂಟಿಯಾಗಿ ರೂ. 65ಲಕ್ಷ ರೂಪಾಯಿಗಳ ಪ್ರಾಜೆಕ್ಟ್ ಆಗಿರುವ ರೋಟರಿ ಮ್ಯಾಮೊಗ್ರಾಫಿ ಸೆಂಟರ್ ಅನ್ನು ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಎ ವರು ಉದ್ಘಾಟಿಸಲಿದ್ದಾರೆ. ಅನಿವಾಸಿ ಉದ್ಯಮಿ ಮೈಕಲ್ ಡಿ’ಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎ.ಆರ್ಆರ್ಎಫ್ಸಿ ಕೃಷ್ಣ ಶೆಟ್ಟಿ, ಡಿ.ಆರ್.ಎಫ್.ಸಿ ರಂಗನಾಥ ಭಟ್, ನಿಕಟಪೂರ್ವ ಜಿಲ್ಲಾ ಗವರ್ನರ್ ವಿಕ್ರಂ ದತ್ತ, ರೋಟರಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ, ವಲಯ ಸೇನಾನಿ ಉಮಾನಾಥ ಪಿ.ಬಿ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.





ಕನಸಿನ ಯೋಜನೆ:
ಮ್ಯಾಮೋಗ್ರಾಫಿ ಸೆಂಟರ್ ರೋಟರಿ ಕ್ಲಬ್ನ ಕನಸಿನ ಯೋಜನೆಯಾಗಿದೆ. 23ನೇ ಇಸವಿಯಲ್ಲಿ ಅಧ್ಯಕ್ಷರಾಗಿದ್ದ ಜೈರಾಜ್ ಭಂಡಾರಿ ಮತ್ತು ಅದರ ನಂತರ ಅಧ್ಯಕ್ಷ ಡಾ. ಶ್ರೀಪತಿ ರಾವ್ ಅವರು ಈ ಯೋಜನೆಗೆ ಬೆಳಕು ಚೆಲ್ಲಿದ್ದರು. ಇದೀಗ ಅದು ಕೂಡಿ ಬಂದಿದೆ. ಇದು ಚಿಕಿತ್ಸೆಯ ಸಾಧನವಲ್ಲ. ಇಲ್ಲಿ ರೋಗವನ್ನು ಪತ್ತೆ ಮಾಡುವ ವಿಧಾನ ಮಾತ್ರ. ರೋಗದ ದೃಢೀಕರಣಕ್ಕೆ ವರದಿಯನ್ನು ಮಂಗಳೂರಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ರೋಗ ಲಕ್ಷದ ಕುರಿತು ವರದಿ ಬರುತ್ತದೆ. ರೋಗದ ಚಿಕಿತ್ಸೆಗಾಗಿ ಮಂಗಳೂರಿಗೆ ತೆರಳಬೇಕಾಗುತ್ತದೆ ಎಂದು ಪ್ರಾಜೆಕ್ಟ್ ಚೇಯರ್ಮ್ಯಾನ್ ಡಾ. ಶ್ಯಾಮ ಬಿ ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಬುಲೆಟಿನ್ ಎಡಿಟರ್ ವಿ.ಜೆ ಪೆರ್ನಾಂಡಿಸ್, ಜೊತೆಕಾರ್ಯದರ್ಶಿ ಲೊಯಲ್ ಮೆವಾಡ ಅವರು ಉಪಸ್ಥಿತರಿದ್ದರು.
60ನೇ ವರ್ಷದ ಸಂಬ್ರಮವನ್ನು ಆಚರಿಸುತ್ತಿರುವ ರೋಟರಿ ಕ್ಲಬ್ ಪುತ್ತೂರು ಈಗಾಗಲೇ ಅಂತರಾಷ್ಟ್ರೀಯ ರೋಟರಿ ಫೌಂಡೇಶನ್ ನ ಗ್ಲೋಬಲ್ ಗ್ರ್ಯಾಂಟ್ ಮೂಲಕ ಸುಸಜ್ಜಿತ ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಸೆಂಟರ್, ಬ್ಲಡ್ ಕಲೆಕ್ಷನ್ ವಾಹನ, ರೋಟರಿ ಕಣ್ಣಿನ ಆಸ್ಪತ್ರೆ, ರೋಟರಿ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್, ರೋಟರಿಪುರದಲ್ಲಿ ಮನೆಗಳ ನಿರ್ಮಾಣ, ಪಾಲಿಕ್ಲೀನಿಕ್ ಸಹಿತ ಹಲವಾರು ಶಾಶ್ವಾತ ಕೊಡುಗೆಗಳನ್ನು ಸಮಾಜಕ್ಕೆ ನೀಡಿದೆ. ಇದೀಗ ಮ್ಯಾಮೋಗ್ರಾಫಿ ಸೆಂಟರ್ ಪುತ್ತೂರಿನ ಮುಕುಟಕ್ಕೆ ಮತ್ತೊಂದು ಗರಿಯಾಗಲಿದೆ.
ಡಾ. ಶ್ರೀಪ್ರಕಾಶ್ ಬಿ










