ವಿಜಯ ಟೈಮ್ಸ್ ಏರ್ಪಡಿಸಿದ್ದ ಶಾರ್ಟ್ ಫಿಲಂ ಸ್ಪರ್ಧೆಯಲ್ಲಿ ಅಚಲ್ ಉಬರಡ್ಕಗೆ ಪ್ರಶಸ್ತಿ

0

ಪುತ್ತೂರು: ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಸಾರಥ್ಯದ ವಿಜಯ ಟೈಮ್ಸ್ ಸಂಸ್ಥೆ ಏರ್ಪಡಿಸಿದ್ದ ಶಾರ್ಟ್ ಫಿಲಂ ಸ್ಪರ್ಧೆಯಲ್ಲಿ ಎ.ಯು.ಕ್ರಿಯೇಶನ್ಸ್ ನಿರ್ಮಾಣದ SOS ಕಿರುಚಿತ್ರ ಉತ್ತಮ ಕಿರುಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಅಲ್ಲದೆ ಎ.ಯು.ಕ್ರಿಯೇಶನ್ಸ್ ಮುಖ್ಯಸ್ಥ ಅಚಲ್ ಉಬರಡ್ಕ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇವರು ಪ್ರಶಸ್ತಿ ಪತ್ರ ಮತ್ತು ಹತ್ತು ಸಾವಿರ ರೂ ನಗದು ಪುರಸ್ಕೃತರಾಗಿದ್ದಾರೆ. ಕೋಡಿಂಬಾಡಿ ಗ್ರಾಮದ ಶಾಂತಿನಗರ ನಿವಾಸಿಯಾಗಿದ್ದು ಉಪ್ಪಿನಂಗಡಿ ಶ್ರೀರಾಮ ಶಾಲೆಯ ಸಂಚಾಲಕರಾಗಿರುವ ಯು.ಜಿ.ರಾಧ ಅವರ ಪುತ್ರರಾದ ಅಚಲ್ ಉಬರಡ್ಕರವರು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ.

LEAVE A REPLY

Please enter your comment!
Please enter your name here