




ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನ್ (ಕರ್ನಾಟಕ)ದ ಸಹಯೋಗದೊಂದಿಗೆ ವಿದ್ಯಾವರ್ಧಕ ಸಂಘದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕರಿಗೆ ಸಪ್ತ ಶಕ್ತಿ ಸಂಗಮ ಕಾರ್ಯಕ್ರಮ ನಡೆಯಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಡಾ|| ಸುಧಾರಾವ್ ವಹಿಸಿದ್ದರು. ಮುಖ್ಯ ಅತಿಥಿ MRPL ನಿವೃತ್ತ ಜನರಲ್ ಮ್ಯಾನೇಜರ್ ವೀಣಾ. ಟಿ ಶೆಟ್ಟಿ ಮತ್ತು ಶ್ರೀದೇವಿ ನಾಗರಾಜ್ ಭಟ್, ಕೇಶವ ಕೃಪಾ ಸುಳ್ಯ ಆಗಮಿಸಿ ಮಹಿಳೆಯರಲ್ಲಿ ಜಾಗೃತಿಗೊಳಿಸಬೇಕಾದ ಏಳು ಶಕ್ತಿಗಳ ಬಗ್ಗೆ ತಿಳಿಸಿದರು.






ವಿವೇಕಾನಂದ ಬಿ.ಎಡ್ ಕಾಲೇಜಿನ ಸಂಚಾಲಕಿ ಗಂಗಮ್ಮ.ಎಚ್ ಶಾಸ್ತ್ರಿ ಸಂಕಲ್ಪ ಬೋಧಿಸಿದರು. ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನ್ ನ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ||ಶೋಭಿತ ಸತೀಶ್ ಪ್ರಸ್ತಾವನೆ ನೀಡಿದರು.
ಪ್ರಗತಿಪರ ಹೈನುಗಾರರಾದ ನವಿನಾಕ್ಷಿ ಬಾಲ ಸುಬ್ರಮಣ್ಯ ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ|| ರೇಖಾ ಸ್ವಾಗತಿಸಿದರು. ಬಿ ಎಡ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಅನುರಾಧ ವಂದಿಸಿ,ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ ನಿರುಪಮಾ ನಿರೂಪಿಸಿ, ವಿವೇಕಾನಂದ ಫಾರ್ಮಸಿ ಕಾಲೇಜಿನ ಮತ್ತು ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪೂರ್ಣಿಮಾ, ದೀಪಿಕಾ ಅತಿಥಿಗಳನ್ನು ಪರಿಚಯಿಸಿದರು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಜಯಲಕ್ಷ್ಮಿ ವೈಯುಕ್ತಿಕ ಗೀತೆ ಹಾಡಿದರು.










