




ಪುತ್ತೂರು: ಇಂದಿನ ಯುವಜನತೆಯಲ್ಲಿ ಕ್ರೀಡಾಮನೋಭಾವ ಬೆಳೆದರೆ ಜೀವನದ ಪ್ರತಿಕೂಲ ಪರಿಸ್ಥಿತಿಯಲ್ಲೂ ಅವರು ಛಲಬಿಡದೆ ಸಾಧನೆ ಮಾಡಿ ಜೀವನವನ್ನು ರೂಪಿಸಿಕೊಳ್ಳುತ್ತಾರೆ.ಇಂತಹ ದೃಢ ಮನಸ್ಸಿನ ನಾಗರಿಕರೇ ಸ್ವಸ್ಥ ಸಮಾಜದ ರೂವಾರಿಗಳು.ಅದಕ್ಕಾಗಿ ಕ್ರೀಡೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿರಬೇಕು. ಎಂದು ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆ ನರಿಮೊಗರು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ ಎ. ಯು. ಇವರು ಹೇಳಿದರು.



ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ 2025-26 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ,ಅವರು ಮಾತನಾಡಿದರು. ಕ್ರೀಡೆ ಸಹಶಿಕ್ಷಣದ ಒಂದು ಭಾಗ.ಮನಸ್ಸಿನ ಸಮತೋಲಿತ ಬೆಳವಣಿಗೆಗೆ ಮುಖ್ಯಕಾರಣ ಕ್ರೀಡೆ.ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಸೋಲು ಗೆಲುವಿನ ಅರ್ಥವನ್ನು ತಿಳಿದುಕೊಳ್ಳಬೇಕು.ಈ ಮೂಲಕ ಜಿವನದಲ್ಲಿ ಸಮಚಿತ್ತವನ್ನು ಸಾಧಿಸಿಕೊಳ್ಳಬಹುದು.ಉತ್ತಮ ಕ್ರೀಡಾಪಟು ಉತ್ತಮ ವಿದ್ಯಾರ್ಥಿಯಾಗುತ್ತಾನೆ.ಉತ್ತಮ ವಿದ್ಯಾರ್ಥಿಉತ್ತಮ ನಾಗರಿಕನಾಗುತ್ತಾನೆ.ನಮ್ಮ ಹಾದಿಯ ಪ್ರಗತಿಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಯಶಸ್ವಿ ಜೀವನವನ್ನುರೂಪಿಸಲು ಕ್ರೀಡೆಯು ಸಹಾಯಮಾಡುತ್ತದೆ. ಎಂದು ಹೇಳಿದರು. ವಿದ್ಯಾರ್ಥಿಗಳ ವಿವಿಧ ತಂಡಗಳ ಶಿಸ್ತುಬದ್ಧ ಪಥಸಂಚಲನ ನಡೆಯಿತು.ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು.





ಜಿಲ್ಲಾ ,ರಾಜ್ಯ ಮತ್ತುರಾಷ್ಟ್ರಮಟ್ಟದ ವಿವಿಧಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿಯನ್ನು ತರುವುದರ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ವಿದ್ಯಾರ್ಥಿಗಳ ಆಕರ್ಷಕ ಬ್ಯಾಂಡ್ ಸೆಟ್ ಪಥಸಂಚಲನ ಕಾರ‍್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯರವರು ಮಾತನಾಡುತ್ತಾಕ್ರೀಡೆಯು, ಆತ್ಮವಿಶ್ವಾಸ ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಸಹಕಾರಿ.ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಯ ಮೂಲವಾಗಿದೆ.ವ್ಯಾಯಾಮದ ಅತ್ಯುತ್ತಮ ಸಾಧನವೆಂದು ಪರಿಗಣಿಸಲಾಗಿದೆ.ಹಾಗಾಗಿ ಈ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಸದೃಢ ಪ್ರಜೆಗಳಾಗಿ ಮುನ್ನಡೆಯಿರಿ ಎಂದು ಹೇಳಿದರು.
ಈ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯದೈಹಿಕ ಶಿಕ್ಷಣ ಶಿಕ್ಷಕರಾದ ರಿವಾನ್ ರಾಜ್, ರಶ್ಮಿ, ಪೂಜಾಶ್ರೀ ಮತ್ತು ಕಾಲೇಜಿನ ಕ್ರೀಡಾ ತರಬೇತುದಾರರಾದ ಮನೋಹರ್ ಎನ್. ರವರು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ, ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಸನಿಕಾ ರೈ ವಂದಿಸಿದರು.ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಅರ್ಚನಾ ಕಾರ‍್ಯಕ್ರಮ ನಿರೂಪಿಸಿದರು.









