




ಪುತ್ತೂರು: ಕೆಂಪು ಕಲ್ಲನ್ನು ಕಳವು ಮಾಡಿ ಲಾರಿಯಲ್ಲಿ ಸಾಗಿಸಿ, ಪರವಾನಿಗೆ ವಂಚಿಸಿ ಸರಕಾರದ ರಾಜಸ್ಟಕ್ಕೆ ನಷ್ಟ ಮಾಡಿದ ಆರೋಪದ ಪ್ರಕರಣವೊಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.



ಪುತ್ತೂರು ಗ್ರಾಮಾಂತರ ಪೊಲೀಸ್ ಸಬ್ಇನ್ಸ್ಪೆಕ್ಟರ್ ಗುಣಪಾಲ ಜೆ ಅವರು ಸಿಬ್ಬಂದಿಗಳ ಜೊತೆ ಡಿ.11ರಂದು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಆರ್ಯಾಪು ಗ್ರಾಮದ ಸಂಪ್ಯದಲ್ಲಿ ಲಾರಿಯ ಚಾಲಕನೊಬ್ಬ ತನ್ನ ಲಾರಿಯ ಬಾಡಿಗೆ ಕೆಂಪು ಬಣ್ಣದ ನೀಲಿ ಪಟ್ಟಿಯ ನೆಟ್ ಹಾಕಿಕೊಂಡು, ಪೊಲೀಸ್ ವಾಹನವನ್ನು ಗಮನಿಸಿ ತನ್ನ ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಿದ್ದುದನ್ನು ನಿಲ್ಲಿಸಿ ಪರಿಶೀಲನೆ ಮಾಡಿದಾಗ ಕೇರಳ ರಾಜ್ಯದ ಪೆರ್ಲ ಬೆದ್ರಂಪಳ್ಳ ಕಲ್ಲಿನ ಕೋರೆಯಿಂದ ಕೊಡಗು ಜಿಲ್ಲೆಯ ಪೆರಾಜೆಯಿಂದ ಗುಲ್ಬರ್ಗಾ ಜಿಲ್ಲೆಗೆ ಸಾಗಿಸಲು ಮಡಿಕೇರಿ ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಿಗೆ ಪಡೆದುಕೊಂಡು ಹರವಾನಿಗೆ ಇಲ್ಲದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕೆಮ್ಮಾಯಿ ಕಡೆ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.





ಈ ನಿಟ್ಟಿನಲ್ಲಿ ಲಾರಿಯ ಚಾಲಕ ಮಹಮ್ಮದ್ ಶಾಫಿ, ಮಾಲಕ ರಿಯಾಝ್, ಕೋರೆಯ ಮಾಲಿಕ ಅಬ್ದುಲ್ ಖಾದರ್ ಅವರು ಕೇರಳ ರಾಜ್ಯದ ಪೆರ್ಲ ಎಂಬಲ್ಲಿಂದ ಖನಿಜ ಸಂಪತ್ತಾದ 350 ಕೆಂಪು ಕಲ್ಲನ್ನು ಕಳವು ಮಾಡಿ ಸದ್ರಿ ಲಾರಿಯಲ್ಲಿ ತುಂಬಿಸಿ ಅದರ ಚಾಲಕನು ಅತಿಯಾದ ವೇಗ ಮತ್ತು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಲಾಯಿಸಿಕೊಂಡು ಸಾಗಾಟ ಮಾಡುತ್ತಾ ಅಕ್ರಮ ಲಾಭ ಗಳಿಸಿ ಸರ್ಕಾರದ ರಾಜಸಕ್ಕೆ ನಷ್ಟವನ್ನುಂಟು ಮಾಡಿರುವುದಾಗಿ ಆರೋಪಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








