




ವಿಟ್ಲ: ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಇನ್ಸ್ಟ್ಯೂಟ್ ಮ್ಯಾನೇಜ್ಮೆಂಟ್ ಕಮಿಟಿ ವಿಟ್ಲ, ಹೆಚ್ ಡಿ ಎಫ್ ಸಿ ಬ್ಯಾಂಕ್ ಪುತ್ತೂರು ಹಾಗೂ ಜಿಲ್ಲಾಸ್ಪತ್ರೆ ವೆನ್ಲಾಕ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವು ಡಿ.12ರಂದು ನಡೆಯಿತು.



ಐ.ಎಮ್.ಸಿ ನ ಸದಸ್ಯರು ಮತ್ತು ಇಕೋ-ಬ್ಲಿಸ್ ನ ಮಾಲಕ ರಾಜಾರಾಮ್ ಸಿ.ಜಿ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ರಕ್ತದಾನ ಮಾಡಿ, ಎಲ್ಲಾ ದಾನಕ್ಕಿಂತ ರಕ್ತದಾನ ಶ್ರೇಷ್ಠ ದಾನವೆಂದು ಹೇಳಬಹುದು ಯಾವುದೇ ಖರ್ಚು ಇಲ್ಲದೇ ಆರೋಗ್ಯವಂತ ನಾಗರಿಕರು ಮಾಡಬಹುದಾದ ದಾನ ರಕ್ತದಾನ.ಇಂತಹ ಉತ್ತಮ ಶಿಬಿರವನ್ನು ಹಮ್ಮಿಕೊಂಡಿರುವುದು ನಿಜವಾಗಿಯೂ ಒಂದು ಅರ್ಥಪೂರ್ಣವಾದ ಕಾರ್ಯಕ್ರಮ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.





ಜಿಲ್ಲಾಸ್ಪತ್ರೆಯ ವೆನ್ಲಾಕ್ ಬ್ಲಡ್ ಬ್ಯಾಂಕ್ ಉಸ್ತುವಾರಿ ಅಶೋಕ್ ಮಾತನಾಡಿ ರಕ್ತದಾನದಿಂದ ಒಂದು ಜೀವ ಉಳಿಸಲು ಸಾಧ್ಯ, ಮನುಷ್ಯನ ಜೀವವನ್ನು ಕಾಪಾಡುವುದರಲ್ಲಿ ರಕ್ತದ ಪಾತ್ರ ಬಹಳ ಮಹತ್ವದಾಗಿದೆ ರಕ್ತದಾನದಿಂದ ಯಾವುದೇ ತೊಂದರೆಯಿಲ್ಲ, ಆರೋಗ್ಯ ಚೇತರಿಕೆ ಸಾಧ್ಯ ಎಂದು ತಿಳಿಸಿದರು. 32 ತರಬೇತಿದಾರರು ರಕ್ತದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ಡಾ| ಕುಶಿ, ಹೆಚ್ ಡಿ ಎಫ್ ಸಿ ಬ್ಯಾಂಕ್ ಪುತ್ತೂರಿನ ನಿತಿನ್ ಹಾಗೂ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ತೀರ್ಥಾಕ್ಷಿ ಎನ್ ಉಪಸ್ಥಿತರಿದ್ದರು.
ಚೇತನ್ ಸ್ವಾಗತಿಸಿ, ಶ್ರೇಯಸ್ ವಂದಿಸಿದರು. ಪವನ್ ಕುಮಾರ್ ನಿರೂಪಿಸಿದರು.ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳಾದ ದಿಲೀಪ್ ಪಿ, ಸವಿತಾ ಎಮ್ ಸಂಯೋಜಿಸಿದರು.ಸಂಸ್ಥೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.









