






ಪುತ್ತೂರು: ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀಜನಾರ್ದನ ದೇವಸ್ಥಾನದಲ್ಲಿ ಜ.6ರಿಂದ 8ರ ತನಕ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯು ಇತ್ತೀಚೆಗೆ ಬಿಡುಗಡೆಗೊಂಡಿತು.


ದೇವಸ್ಥಾನದಲ್ಲಿ ಸಂಜೆ ಪೂಜೆ ನಡೆದು ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರೆಕರೆ ವೆಂಕಟ್ರಮಣ ಭಟ್, ಸಮಿತಿ ಸದಸ್ಯರಾದ ರಾಧಾಕೃಷ್ಣ ಕುಂಜಾರು, ಸತ್ಯನಾರಾಯಣ ರಾವ್ ಕುಂಜಾರು, ಅರ್ಚಕ ಶ್ರೀಕಾಂತ್ ಭಟ್, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.













