




ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ ಡಿ.18 ರಂದು ಪೂರ್ವಾಹ್ನ ಗಂಟೆ 10ರಿಂದ ಅಪರಾಹ್ನ 5ರವರೆಗೆ ಕಬಕ, ನಗರ ಮತ್ತು ಕೆದಿಲ ಫೀಡರ್‌ಗಳಿಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.



ಆದುದರಿಂದ, 110/33/11 ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ಕಲ್ಲೇಗ, ನಗರ ಜಂಕ್ಷನ್, ಕಬಕ, ಮುರ, ವಿದ್ಯಾಪುರ, ರಕ್ತೇಶ್ವರಿ ವಠಾರ, ಶೇವಿರೆ. ಮಂಜಲ್ಪಡ್ಪು, ಕೆ.ಎಂ. ಸ್ಟೋರ್, ಉರ್ಲಾಂಡಿ, ಬಪ್ಪಳಿಗೆ, ವಿವೇಕಾನಂದ ಕಾಲೇಜು, ಪಡ್ಡಾಯೂರು, ಪೆರಿಯತ್ತೋಡಿ, ಗಣೇಶ್ ಭಾಗ್, ಸನ್ನಿಧಿ ಲೇಔಟ್, ನವನಗರ, ಕಾರ್ಜಾಲು, ಚನಿಲ ಮತ್ತು ಕಪ್ಪೆಕೆರೆ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.













