






ಪುತ್ತೂರು: ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ನೂತನ ಕಾರ್ಯಕಾರಿ ಸಮಿತಿಯ ದ್ವಿತೀಯ ಸಾಮಾನ್ಯ ಸಭೆಯು ಡಿ.16 ರಂದು ಬೀರಮಲೆ ಬೆಟ್ಟದ ಗಾಂಧಿ ಮಂಟಪದಲ್ಲಿ ನಡೆಯಿತು.


ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಅಧ್ಯಕ್ಷ ಎ.ಜಗಜ್ಜೀವನ್ ದಾಸ್ ರೈರವರು ಸ್ವಾಗತಿಸಿ ಮಾತನಾಡಿ, 2026ನೇ ಫೆಬ್ರವರಿ 8 ರಂದು ಬಿರುಮಲೋತ್ಸವ ಕಾರ್ಯಕ್ರಮವನ್ನು ವಿವಿಧ ಚಟುವಟಿಕೆಗಳು, ಸ್ಪರ್ಧೆಗಳು, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಸಲಾಗುವುದು ಹೇಳಿ ಸಭೆಯಲ್ಲಿ ತೀರ್ಮಾನಿಸಲಾಯಿತು.



ಇದೇ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈರವರ ವಿಶೇಷ ಮುತುವರ್ಜಿಯಿಂದ ಸುಮಾರು ರೂ.ಎರಡು ಕೋಟಿ ವೆಚ್ಚದಲ್ಲಿ ಬೀರಮಲೆ ಬೆಟ್ಟದಲ್ಲಿ ಸ್ಥಾಪಿಸಿದ ಡಿಜಿಟಲ್ ಲೈಟಿಂಗ್ ಟ್ರೀ ಹಾಗೂ ಬೀರಮಲೆ ಬೆಟ್ಟದ ವಿವಿಧ ಲೈಟಿಂಗ್ ಯೋಜನೆಗಳ ಉದ್ಘಾಟನೆಯ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈರವರ ಅನುಕೂಲದಂತೆ ನಡೆಸುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಬೀರಮಲೆ ಬೆಟ್ಟದ ಸ್ಥಾಪಕಾಧ್ಯಕ್ಷರಾದ ದಿ.ಕೋಚಣ್ಣ ರೈರವರ ಪುತ್ಥಳಿ ಹಾಗೂ ವರ್ಣರಂಜಿತ ಕಾರಂಜಿ ಕುರಿತ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಬೆಟ್ಟದ ಸುತ್ತಲೂ ವಾಕಿಂಗ್ ಪಾಥ್ ನಿರ್ಮಾಣ, ತಡೆಬೇಲಿ ರಚನೆ, ಗಾರ್ಡ್ ಗಳ ನೇಮಕ, ಪಾರ್ಕ್ ನಿರ್ಮಾಣದ ವಿಚಾರಗಳ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು.
ಈ ಎಲ್ಲಾ ಅಭಿವೃದ್ಧಿ ಕಾರ್ಯಗಳು ಸಾಕಾರಕ್ಕೆ ಅನುಕೂಲವಾಗುವಂತೆ ಸಾರ್ವಜನಿಕರಿಂದ ಧನ ಸಂಗ್ರಹವನ್ನು ಅಪೇಕ್ಷಿಸಲಾಯಿತು. ಸಭೆಯಲ್ಲಿ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಪ್ರೊ|ದತ್ತಾತ್ರೇಯ ರಾವ್, ಜೈರಾಜ್ ಭಂಡಾರಿ, ಶಿವರಾಮ ಆಳ್ವ, ಕೇಶವ ಪಿರವರು ಉಪಸ್ಥಿತರಿದ್ದರು. ಕಾರ್ಯದರ್ಶಿ ನಿತಿನ್ ಪಕ್ಕಳ ವಂದಿಸಿದರು.










