ಹಿರೇಬಂಡಾಡಿ ಮಂಜುಶ್ರೀ ಭಜನಾ ಮಂದಿರದ ಮಾಜಿ ಅಧ್ಯಕ್ಷ ಐತ್ತಪ್ಪ ಸಾಲ್ಯಾನ್ ನಿಧನ

0

ಹಿರೇಬಂಡಾಡಿ: ಗ್ರಾಮದ ಕಜೆಕೋಡಿ ನಿವಾಸಿ, ಹಿರೇಬಂಡಾಡಿ ಮುರದಮೇಲು ಭಜನಾ ಮಂದಿರದ ಮಾಜಿ ಅಧ್ಯಕ್ಷ ಐತ್ತಪ್ಪ ಸಾಲ್ಯಾನ್(60ವ.)ರವರು ಅಲ್ಪಕಾಲದ ಅಸೌಖ್ಯದಿಂದ ಡಿ.16ರಂದು ಸ್ವಗೃಹದಲ್ಲಿ ನಿಧನರಾದರು.


ಐತ್ತಪ್ಪ ಸಾಲ್ಯಾನ್ ಅವರು ಬಿಜೆಪಿ ಹಿರಿಯ ಕಾರ್ಯಕರ್ತರಾಗಿದ್ದು ಅಯೋಧ್ಯೆ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹಿರೇಬಂಡಾಡಿ ಮುರದಮೇಲು ಮಂಜುಶ್ರೀ ಭಜನಾ ಮಂದಿರದ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಇವರು ಹಲವಾರು ವರ್ಷ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ ಹೊನ್ನಮ್ಮ, ಪುತ್ರಿ ಅಶ್ವಿನಿ, ಚಂದ್ರಿಕಾರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

LEAVE A REPLY

Please enter your comment!
Please enter your name here