






ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನ 2025-26 ನೇ ಸಾಲಿನ ಮಹಿಳಾ ಗ್ರಾಮಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ದ.17 ರಂದು ಗ್ರಾಪಂ ಕಛೇರಿ ಸಭಾಂಗಣದಲ್ಲಿ ನಡೆಯಿತು.


ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಹರಿಣಾಕ್ಷಿಯವರು ಇಲಾಖೆ ಹಾಗೇ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಎನ್‌ಆರ್‌ಎಲ್‌ಎಮ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಜಗತ್ ಕೆ.ರವರು ಸ್ವಚ್ಚತೆಯ ಬಗ್ಗೆ ಮಾಹಿತಿ ನೀಡಿದರು.




ಇದೇ ಸಂದರ್ಭದಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಶ್ರೀ ಅನ್ನಪೂಣೇಶ್ವರಿ ಚಾರಿಟಿ ಪೌಂಢೇಶನ್ ಆಶ್ರಯದಲ್ಲಿ ನವೀಕರಿಸಬಹುದಾದ ಇಂಧನ, ಘನತ್ಯಾಜ್ಯ, ನಿರ್ವಹಣೆ ಹಾಗೂ ಮಳೆ ನೀರು ಕೊಯ್ಲಿನ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.ಟ್ರಸ್ಟ್‌ನ ಸದಸ್ಯೆ ಸೌಮ್ಯರವರು ಇಂಧನ ಮತ್ತು ಸೋಲಾರ್ ಅಳವಡಿಕೆಯ ಬಗ್ಗೆ ಮಾಹಿತಿ ನೀಡಿದರು.ಟ್ರಸ್ಟ್‌ನ ವಿನಾಯಕರವರು ನವೀಕರಿಸಬಹುದಾಗ ಇಂಧನ ಹಾಗೂ ಮಳೆ ಕೊಯ್ಲಿನ ಬಗ್ಗೆ ಮಾಹಿತಿ ನೀಡಿದರು.
ಒಳಮೊಗ್ರು ಗ್ರಾಮ ಆಡಳಿತ ಅಧಿಕಾರಿ ಸರೋಜರವರು ವೋಟರ್ ಲಿಸ್ಟ್‌ನ ಎಸ್‌ಐಆರ್ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಸಮುದಾಯ ಆರೋಗ್ಯ ಅಧಿಕಾರಿ ಪ್ರಮೀಳಾರವರು ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಪಂ ಸದಸ್ಯರುಗಳಾದ ಮಹೇಶ್ ರೈ ಕೇರಿ, ಶೀನಪ್ಪ ನಾಯ್ಕ, ಸುಂದರಿ ಪರ್ಪುಂಜ, ಶಾರದಾ ಆಚಾರ್ಯ, ರೇಖಾ ಯತೀಶ್ ಬಿಜತ್ರೆ,ನಳಿನಾಕ್ಷಿ, ಎನ್‌ಆರ್‌ಎಲ್‌ಎಂ ಕೃಷಿಯೇತರ ಚಟುವಟಿಕೆ ತಾ.ವ್ಯವಸ್ಥಾಪಕಿ ನಳಿನಾಕ್ಷಿ, ಅನುಗ್ರಹ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ನಾಯ್ಕ್ ಕೆ ಸ್ವಾಗತಿಸಿದರು. ಕಾರ್ಯದರ್ಶಿ ಜಯಂತಿ ವಂದಿಸಿದರು. ಸಿಬ್ಬಂದಿಗಳಾದ ಗುಲಾಬಿ, ಜಾನಕಿ, ಕೇಶವ, ಲೋಕನಾಥ್, ಮೋಹನ್ ಕೆ.ಪಿ, ಸಿರಿನಾ ಸಹಕರಿಸಿದ್ದರು.
ಸಂಜೀವಿನಿ ಒಕ್ಕೂಟದ ಎಂಬಿಕೆ, ಅಧ್ಯಕ್ಷರಿಗೆ ಸನ್ಮಾನ
ಗ್ರಾಮ ಪಂಚಾಯತ್‌ನ ಪ್ರತಿಯೊಂದು ಕಾರ್ಯಕ್ರಮಗಳಿಗೂ ಸಂಪೂರ್ಣ ಸಹಕಾರ ನೀಡುತ್ತಿರುವ ಪಂಚಾಯತ್ ಮಟ್ಟದ ಅನುಗ್ರಹ ಸಂಜೀವಿನಿ ಒಕ್ಕೂಟದ ಮೇಲ್ವಿಚಾರಕರಾದ ಚಂದ್ರಿಕಾ ರೈ ಮೊಡಪ್ಪಾಡಿ ಮತ್ತು ಅಧ್ಯಕ್ಷೆ ಗೀತಾ ಅಲಂಗೂರುರವರನ್ನು ಸನ್ಮಾನಿಸಿ ಗೌರವಿಸಲಾಯಿತು.
‘ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಆರಂಭಿಸಿದ್ದು 2002 ರಿಂದ 2025 ರ ಪಟ್ಟಿಯನ್ನು ಮ್ಯಾಚ್ ಮಾಡಲಾಗುತ್ತಿದ್ದು 2002 ರ ಪಟ್ಟಿಯಲ್ಲಿ ಇಲ್ಲದವರು ತಮ್ಮ ತಂದೆ ಅಥವಾ ತಾಯಿಯ ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆಯೊಂದಿಗೆ ಗ್ರಾಮದ ಬೂತ್ ಲೆವಲ್ ಆಫೀಸರ್(ಬಿಎಲ್‌ಓ) ಗಳನ್ನು ಸಂಪರ್ಕಿಸಬೇಕಾಗಿದೆ.’
ಸರೋಜ, ಗ್ರಾಮ ಆಡಳಿತ ಅಧಿಕಾರಿ ಒಳಮೊಗ್ರು ಗ್ರಾಮ










