ಕೊಂಬೆಟ್ಟು : ನಿವೃತ್ತ ಪ್ರಾಂಶುಪಾಲರ ಮನೆ ದರೋಡೆಗೆ ಯತ್ನ

0

ಹೆಲ್ಮೆಟ್ ಧರಿಸಿದ ವ್ಯಕ್ತಿಗಳಿಬ್ಬರಿಂದ ವಿಫಲ ಯತ್ನ

ಪುತ್ತೂರು: ಕೊಂಬೆಟ್ಟಿನಲ್ಲಿರುವ ನಿವೃತ್ತ ಪ್ರಾಂಶುಪಾಲರೊಬ್ಬರ ಮನೆಗೆ ಹೆಲ್ಮೆಟ್ ಧರಿಸಿದ ವ್ಯಕ್ತಿಗಳಿಬ್ಬರು ಬಂದು ದರೋಡೆಗೆ ಯತ್ನಿಸಿದ ಘಟನೆ ಡಿ.17ರಂದು ನಡೆದ ಬಗ್ಗೆ ವರದಿಯಾಗಿದೆ.


ಕೊಂಬೆಟ್ಟು ನಿವಾಸಿ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ ಮತ್ತು ಅವರ ಪತ್ನಿ ವತ್ಸಲರಾಜ್ಞಿ ಅವರ ಮನೆಗೆ ಹೆಲ್ಮೆಟ್ ಧರಿಸಿದ ವ್ಯಕ್ತಿಗಳಿಬ್ಬರು ದರೋಡೆಗೆ ಯತ್ನಿಸಿದ್ದರು. ರಾತ್ರಿ ವೇಳೆ ಊಟ ಮಾಡಿ ಮನೆಯೊಳಗೆ ಎ.ವಿ.ನಾರಾಯಣ್ ಅವರ ಪತ್ನಿ ಕೂತಿದ್ದರು. ಈ ವೇಳೆ ತೆರೆದುಕೊಂಡಿದ್ದ ಹಿಂಬದಿಯ ಬಾಗಿಲಿನಿಂದ ಒಳನುಗಿದ್ದ ಹೆಲ್ಮೆಟ್ ಧರಿಸಿದ ವ್ಯಕ್ತಿಗಳಿಬ್ಬರು ಎ.ವಿ.ನಾರಾಯಣ್ ಅವರ ಪತ್ನಿಯ ಕಣ್ಣುಗಳನ್ನು ಮತ್ತು ಬಾಯಿಯನ್ನು ಹಿಂದಿನಿಂದ ಮುಚ್ಚಿದ್ದರು. ಆಗ ವತ್ಸಲರಾಜ್ಞಿಯವರು ಹೊರಲಾಡಿದಾಗ ಕುರ್ಚಿಯಿಂದ ಕೆಳಗೆ ಬಿದು ಬೊಬ್ಬೆ ಹೊಡೆದಿದ್ದಾರೆ. ಇದೇ ವೇಳೆ ಎ.ವಿ.ನಾರಾಯಣ್ ಅವರು ಕೂಡಾ ಅಲ್ಲಿಗೆ ಬಂದಾಗ ಅವರ ಕಣ್ಣುಗಳನ್ನು ಬಾಯಿಯನ್ನು ಮುಚ್ಚಿದ್ದಾರೆ. ಬಳಿಕ ಗಾಬರಿಗೊಂಡ ಅವರಿಬ್ಬರು ಮನೆಯ ಹಿಂಬದಿಯ ಬಾಗಿಲ ಮೂಲಕ ಕತ್ತಲ್ಲಿ ಓಡಿಹೋಗಿದ್ದಾರೆ. ಈ ಕುರಿತು ಎ.ವಿ.ನಾರಾಯಣ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯಿಂದ ಅವರ ಮನೆಯಿಂದ ಯಾವುದೇ ಸೊತ್ತುಗಳು ಕಳವಾಗಿಲ್ಲ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here