






ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೀರಮಂಗಲ ಸವಾರಿಯಲ್ಲಿ ಕಬ್ಬಿನ ಹಾಲಿನ ಜ್ಯೋಸ್, ಫಲಹಾರ ಒದಗಿಸುತ್ತಿದ್ದ ಮರೀಲ್ನ ಭಾರತ್ ಗ್ರೂಪ್ಸ್ನ ಮಾಲಕ ತಿಮ್ಮಪ್ಪ ಗೌಡ ಅವರು ಧನುಪೂಜೆಗೂ ಫಲಹಾರ ಒದಗಿಸಿದ ಹಿನ್ನೆಲೆಯಲ್ಲಿ ಅವರನ್ನು ದೇವಳದ ವತಿಯಿಂದ ಗೌರವಿಸಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಅವರು ದೇವಳದ ಗೌರವಾರ್ಥವಾಗಿ ಶಲ್ಯ ತೊಡಿಸಿ ಗೌರವಿಸಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ ಉಪಸ್ಥಿತರಿದ್ದರು.












