






ಪುತ್ತೂರು: ಬಾಲ ಕಲಾವಿದೆ ಸೋನಿಕಾ ಜನಾರ್ಧನ್ ಪುತ್ತೂರು ಮತ್ತು ತಂಡದವರು ಡಿ. 22 ರಿಂದ ಜ.26 ರ ವರೆಗೆ ವಿವಿದೆಡೆ ನಡೆಸಿ ಕೊಡಲಿರುವ ಸಂವಿಧಾನ ಪೀಠಿಕೆ ಗಾಯನ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್. ಸಿ ಮಹದೇವಪ್ಪರವರು ಮೈಸೂರಿನಲ್ಲಿ ಚಾಲನೆ ನೀಡಿದರು.


ಬಳಿಕ ಮಾತಾಡಿದ ಸಚಿವರು ಈಗಾಗಲೇ ಸರಕಾರವು ಸಂವಿಧಾನ ಪೀಠಿಕೆಯನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ, ಸರಕಾರಿ ಕಚೇರಿ ಗಳಲ್ಲಿ, ಸಂಘ ಸಂಸ್ಥೆ ಗಳಲ್ಲಿ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಬಾಲ ಪ್ರತಿಭೆ ಸೋನಿಕಾ ಜನಾರ್ಧನ್ ಮತ್ತು ತಂಡದವರು ಸಂವಿಧಾನ ಪೀಠಿಕೆ ಗಾಯನ ಅಭಿಯಾನ ನಡೆಸುತ್ತಿದ್ದಾರೆ ಇದು ಯಶಸ್ವಿಯಾಗಲಿ ಜೊತೆಗೆ ಪ್ರತಿಯೊಬ್ಬರಲ್ಲಿ ಸಂವಿಧಾನ ಜಾಗೃತಿ ಮೂಡಲಿ ಎಂದು ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಸಾಂಸ್ಕೃತಿಕ ಉಪ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ, ಉಪಾಧ್ಯಕ್ಷರಾದ ಮೆಲ್ಲಹಳ್ಳಿ ರಾಜೇಶ್, ಸಿ ಗೌಡ ಹಾಗೂ ನರಸೀಪುರ ಪುರಸಭೆ ಮಾಜಿ ಅಧ್ಯಕ್ಷರು ಮಹದೇವಸ್ವಾಮಿ, ಹಾಗೂ ಉಪ ಸಮಿತಿಯ ಸದಸ್ಯರುಗಳಾದ ಸ್ಮಿತಾ ,ಅನಿತಾ, ಪ್ರಿಯದರ್ಶಿನಿ, ಮಲ್ಲಿಕಾ, ಸಂಪತ್ ಕುಮಾರ್, ಜನಾರ್ಧನ್ ಪುತ್ತೂರು, ಪ್ರಮೀಳಾ ಜನಾರ್ಧನ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂವಿಧಾನ ಪೀಠಿಕೆ ಗಾಯನ ಅಭಿಯಾನವು ಮೈಸೂರು ಸೇರಿದಂತೆ ಪುತ್ತೂರು ತಾಲೂಕಿನಲ್ಲೂ ನಡೆಯಲಿದೆ.










