







ಪುತ್ತೂರು: ಭಗವಾನ್ ಶ್ರೀರಾಮಚಂದ್ರ ದೇವರು ಸಪರಿವಾರ ಸಹಿತ ಪ್ರತಿಷ್ಠಾಪನೆಗೊಂಡು ಭಕ್ತರಿಗೆ ದರ್ಶನ ನೀಡುತ್ತಿರುವ ಅತ್ಯಂತ ಕಾರಣಿಕತೆಯ ಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ 34 ನೇ ವಾರ್ಷಿಕ ಪ್ರತಿಷ್ಠಾ ಮಂಗಳೋತ್ಸವದ ಅಂಗವಾಗಿ ದ.24 ರಂದು ಸಂಜೆ ಆಲಡ್ಕ ಶ್ರೀ ಸದಾಶಿವ ಕುಣಿತ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು.


ರಾತ್ರಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಊರ ಪರವೂರ ನೂರಾರು ಭಕ್ತರು ಆಗಮಿಸಿ ಶ್ರೀ ದೇವರ ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು. ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರಾಘವ ಗೌಡ ಕೆರೆಮೂಲೆ, ಪ್ರಧಾನ ಕಾರ್ಯದರ್ಶಿ ಅಗರಿ ಯಶೋಧರ ಚೌಟ ಪಟ್ಟತ್ತಡ್ಕ, ಕೋಶಾಧಿಕಾರಿ ಮುಂಡಾಲಗುತ್ತು ಮೋಹನ್ ಆಳ್ವ, ಭಜನಾ ಸಮಿತಿಯ ಅಧ್ಯಕ್ಷ ವಿನೋದ್ ಪೂಜಾರಿ ಕೋಡಿಯಡ್ಕ, ಕಾರ್ಯದರ್ಶಿ ನಿತೇಶ್ ರೈ ಕೋರಂಗ ಹಾಗೂ ಆಡಳಿತ ಸಮಿತಿ, ಭಜನಾ ಸಮಿತಿಯ ಸರ್ವ ಸದಸ್ಯರುಗಳು, ಶ್ರೀ ರಾಮ ಮಂದಿರದ 129 ಮನೆಯ ಸೇವಾರ್ಥಿಗಳು ಉಪಸ್ಥಿತರಿದ್ದರು.




ನಾಳೆ(ದ.26) ತಂಬಿಲ ಸೇವೆ
ದ.26 ರಂದು ಸಂಜೆ ಸ್ಥಳ ಸಾನಿಧ್ಯ ದೈವಗಳಾದ ಶ್ರೀ ಗುಳಿಗ ಮತ್ತು ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ನಡೆದು ರಾತ್ರಿ ತಂಬಿಲ ಪ್ರಸಾದ ಭೊಜನ ನಡೆಯಲಿದೆ. ಭಕ್ತಾಧಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂದಿರದ ಪ್ರಕಟಣೆ ತಿಳಿಸಿದೆ.










