






ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕದ 48ನೇ ವರ್ಷದ ಘಟಕಾಡಳಿತ ಮಂಡಳಿಯ ಪದಪ್ರದಾನ ಸಮಾರಂಭ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾಂಶುಪಾಲ ಮಹಾಲಿಂಗೇಶ್ವರ ಭಟ್ ಮಧುವನ ಮಾತನಾಡಿ, ಜೆಸಿಐ ಸಂಘಟನೆಯು ಉತ್ತಮ ಯುವಕರ ಸಂಘಟನೆಯಾಗಿದ್ದು, ವ್ಯಕ್ತಿತ್ವ ವಿಕಸನ ಮತ್ತು ಸಮಾಜ ಸೇವೆಗಾಗಿ ಉತ್ತಮ ಹೆಸರನ್ನು ಪಡೆದುಕೊಂಡಿದೆ ಎಂದರು.



ಜೇಸಿಐ ವಲಯ 15ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ನೂತನ ಘಟಕ ಅಧ್ಯಕ್ಷರಾದ ಅವನೀಶ್ ಪಿ. ಮತ್ತು ತಂಡಕ್ಕೆ ಪ್ರಮಾಣ ವಚನ ಬೋಧಿಸಿದರು. ವಲಯ ೧೫ರ ಉಪಾಧ್ಯಕ್ಷ ಜಿತೇಶ್ ಪಿರೇರಾ ಮಾತನಾಡಿ, ನೂತನ ತಂಡಕ್ಕೆ ಶುಭಹಾರೈಸಿದರು. ೨೦೨೫ರ ಘಟಕಾಧ್ಯಕ್ಷ ನಟೇಶ್ ಪೂಜಾರಿ ವರದಿ ವಾಚಿಸಿದರು. ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ಮಾತನಾಡಿ ಶುಭ ಹಾರೈಸಿದರು. ನೂತನ ಕಾರ್ಯದರ್ಶಿ ಶ್ರೀ ಗಣೇಶ್ ಪಿ. ವಂದಿಸಿದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಜೆಸಿಐ ಪೂರ್ವಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.










