






ಸವಣೂರು : ಸವಣೂರು ಶಾಂತಿನಗರ ಮೆಸ್ಕಾಂ ಸಬ್ ಸ್ಟೇಷನ್ ಸಮೀಪದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅಪಾರ ಗಿಡ ಮರಗಳು ಸುಟ್ಟು ಕರಕಲಾದ ಘಟನೆ ಡಿ.31ರ ರಾತ್ರಿ ನಡೆದಿದೆ.



ಅಗ್ನಿಶಾಮಕ ದಳದ ಸಿಬ್ಬಂದಿಗಳೊಂದಿಗೆ ಸವಣೂರು ಗ್ರಾ.ಪಂ ಸದಸ್ಯ ರಫೀಕ್ ಎಂ.ಎ ಹಾಗೂ ಸ್ಥಳೀಯ ಯುವಕರ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯ ನಡೆಯಿತು.



ಈ ಸಂದರ್ಭದಲ್ಲಿ ಸ್ಥಳೀಯರಾದ ಕರೀಂ,ಅನ್ವರ್, ನಿಯಾಝ್ ಸಿ ಎ,ಸುಹೈಲ್,ಭಾಸ್ಕರ,ಸಿಜಾಸ್,ಅಲ್ತಾಫ್ ಮೊದಲಾದವರು ಯುವಕರು ಅಗ್ನಿ ಶಾಮಕ ಸಿಬ್ಬಂದಿಗಳೊಂದಿಗೆ ಸಹಕರಿಸಿದರು.










