ಕಡಬ: ಪಿಜಕ್ಕಳ ಚಾವಡಿ ಮನೆ ಹೊನ್ನಮ್ಮರವರ ಶ್ರದ್ಧಾಂಜಲಿ ಸಭೆ

0

ಕಡಬ: ಡಿ.15ರಂದು ನಿಧನರಾದ ಕಡಬ ಗ್ರಾಮದ ಪಿಜಕ್ಕಳ ಚಾವಡಿ ಮನೆ ಶ್ರೀಲಕ್ಷ್ಮೀ ನಿಲಯ ನಿವಾಸಿ ಹೊನ್ನಮ್ಮರವರ ಶ್ರದ್ದಾಂಜಲಿ ಸಭೆ ಡಿ.31ರಂದು ಕಡಬ ಗ್ರಾಮದ ಪಿಜಕ್ಕಳ ಚಾವಡಿ ಮನೆ ಶ್ರೀ ಲಕ್ಷ್ಮೀನಿಲಯದಲ್ಲಿ ನಡೆಯಿತು.


ಊರಿನ ಪ್ರಮುಖರಾದ ನೋನಪ್ಪ ಗೌಡ ನಂದೋಳಿರವರು ಮಾತನಾಡಿ, ಮೃತ ಹೊನ್ನಮ್ಮರವರದ್ದು ಸರಳತೆ, ಶ್ರೇಷ್ಠ ಸಂಸ್ಕಾರ, ನಯ ವಿನಯದಿಂದ ಕೂಡಿದ ವ್ಯಕ್ತಿತ್ವ, ನ್ಯಾಯ ನಿಷ್ಠೆಯಿಂದ ಬದುಕನ್ನು ಸಾಗಿಸಿ ಸಮಾಜಕ್ಕೂ, ಕುಟುಂಬಕ್ಕೂ ಮಾದರಿಯಾಗಿದ್ದರು ಎಂದು ಗುಣಗಾನ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಮೆನೇಜರ್ ಪುಟ್ಟಣ್ಣ ಗೌಡ, ಕೊರಗಪ್ಪ ಗೌಡ ಕಲ್ಲರ್ಪೆ ಪಿಜಕ್ಕಳ, ಕಡಬ ಪಟ್ಟಣ ಪಂಚಾಯತ್ ಸದಸ್ಯ ದಯಾನಂದ ಗೌಡ ಪಿಜಕ್ಕಳ, ನಿವೃತ್ತ ಶಿಕ್ಷಕ ಸುಂದರ ಗೌಡ ಪಣೆಮಜಲು, ಚೆನ್ನಪ್ಪ ಗೌಡ ಕಜೆಮೂಲೆ, ನಿವೃತ್ತ ಶಿಕ್ಷಕ ಜನಾರ್ದನ ಗೌಡ ಪಣೆಮಜಲು, ತಾ.ಪಂ.ಮಾಜಿ ಸದಸ್ಯ ಗಣೇಶ್ ಕೈಕುರೆ, ಬಿ.ಎಸ್.ಎನ್.ಎಲ್ ನಿವೃತ್ತ ಜೆ.ಇ.ಚೆನ್ನಕೇಶವ ಮಂಡೆಕೋಲು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಗಿರಿಜ ಕೆದಿಲ ಪಂಜ, ಪ್ರಗತಿಪರ ಕೃಷಿಕರಾದ ವಿಶ್ವನಾಥ ಗೌಡ ರಾಯಿ ಸಿದ್ದಕಟ್ಟೆ, ಯಮುನಾ ಕುದ್ಕೋಳಿ, ಬಾಬು ಗೌಡ ಕುದ್ರಡ್ಕ ಬಲ್ಯ, ವೆಂಕಪ್ಪ ಗೌಡ ಕುದ್ರಡ್ಕ ಬಲ್ಯ, ನೀಲಮ್ಮ ಅಂಗಣ, ರಾಮಣ್ಣ ಗೌಡ ಮುಂಡ್ರೋಟು, ಶೀಲಾವತಿ ಅಂಗಣ, ಗಣೇಶ್ ಮೂಜೂರು, ಜೀವನ್‌ಪ್ರಕಾಶ್ ಕೋಂಕ್ಯಾಡಿ, ಸುಂದರ ಗೌಡ ಮಂಡೆಕರ, ಯಶೋಧರ ಗೌಡ ಪೂವಳ, ವರ್ಗೀಸ್ ಪಿಜಕ್ಕಳ ಸೇರಿದಂತೆ ಹಲವು ಮಂದಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ಮೃತರ ಪುತ್ರರಾದ ಬಿ.ಎಸ್.ಎನ್.ಎಲ್ ನಿವೃತ್ತ ಸಿಬ್ಬಂದಿ ಚೆನ್ನಪ್ಪ ಗೌಡ, ಕಡಬ ಗೃಹರಕ್ಷಕ ಸಿಬ್ಬಂದಿ ದಯಾನಂದ ಗೌಡ ಪಿಜಕ್ಕಳ,ಸೊಸೆಯಂದಿರಾದ ಕೊಣಾಲು ಪ್ರೌಢಶಾಲಾ ಶಿಕ್ಷಕಿ ರಮಣಿ, ಮಮತಾ, ಪುತ್ರಿಯರಾದ ನಾಗವೇಣಿ ಶೇಷಪ್ಪ ಗೌಡ ಬೋಳ್ನಡ್ಕ ಕೊಂಬಾರು, ವಿಟ್ಲ ಅಂಗನವಾಡಿ ಶಿಕ್ಷಕಿ ವೀಣಾ, ಅಳಿಯಂದಿರಾದ ಶೇಷಪ್ಪ ಗೌಡ ಬೋಳ್ನಡ್ಕ ಕೊಂಬಾರು, ಗಣೇಶ ಗೌಡ ವಿಟ್ಲ, ಮೊಮ್ಮಕ್ಕಳಾದ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ ಪ್ರೊಫೆಸರ್ ಡಾ.ದಿನೇಶ್, ಉಡುಪಿ ಬಂಟಕಲ್ ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ಮೆಂಟ್‌ನಲ್ಲಿ ಪ್ರೊಫೆಸರ್ ಆಗಿರುವ ಅಶ್ವಿನಿ, ಸೆಂಥಿಲ್ ಎನರ್ಜಿ ಪವರ್ ಪ್ರೈವೇಟ್ ಲಿಮಿಟೆಡ್‌ನ ಶಿಫ್ಟ್ ಇಂಚಾರ್ಜ್ ಗಣೇಶ ಪಿಜಕ್ಕಳ, ಯಶ್ಮಿ,ಭವ್ಯಶ್ರೀ, ಶರತ್ ಕುಮಾರ್ ಮುಂಡ್ರೋಟು, ವಂಶಿಕ್, ಹರ್ಷಾಲಿ, ಲಿಹಾನ್, ಹರಿಪ್ರೀತ್, ಕುಶಾನಿ ಮುಂತಾದವರು ವಿವಿಧ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here