






ಅಧ್ಯಕ್ಷ: ಗಂಗಾಧರ ನಾಯಕ್ ಎಂ., ಪ್ರ.ಕಾರ್ಯದರ್ಶಿ: ವಿಶ್ವಕೇಶವ ಕುರುವೇರಿ, ಕೋಶಾಧಿಕಾರಿ: ದೇವಿಪ್ರಸಾದ್ ಕಲ್ಲಾಜೆ


ಪುತ್ತೂರು : ಅಖಿಲ ಭಾರತ ಗೇರು ಬೆಳೆಗಾರರ ಸಂಘ (AICGA)ದ ಅಧ್ಯಕ್ಷರಾಗಿ ಪುತ್ತೂರು ಗೇರು ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಿ, ಪ್ರಭಾರಿ ನಿರ್ದೇಶಕರಾದ ಗಂಗಾಧರ ನಾಯಕ್ ಎಂ., ಪ್ರಧಾನ ಕಾರ್ಯದರ್ಶಿಯಾಗಿ ಗೇರು ಬೆಳೆಗಾರರಾದ ವಿಶ್ವಕೇಶವ ಕುರುವೇರಿ ಹಾಗೂ ಕೋಶಾಧಿಕಾರಿಯಾಗಿ ದೇವಿಪ್ರಸಾದ್ ಕಲ್ಲಾಜೆರವರು ಆಯ್ಕೆಯಾಗಿದ್ದಾರೆ.



ಪುತ್ತೂರು ಕ್ಯಾಂಪ್ಕೋ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು. ಸಭೆಯಲ್ಲಿ ಗೇರು ರೈತರ ಸಮಸ್ಯೆಗಳು ಮತ್ತು ಗೇರು ಬೆಳೆಗೆ ಪುರಕವಾಗುವಂತಹ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಕ್ಯಾಂಪ್ಕೋ ಮಾಜಿ ಉಪಾಧ್ಯಕ್ಷ ಶಂಕರ ನಾರಾಯಣ ಭಟ್ ಖಂಡಿಗೆ, ಹಿರಿಯ ಗೇರು ಬೆಳೆಗಾರರಾದ ಸುಭಾಶ್ ರೈ ಕಡಮಜಲು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗಂಗಾಧರ ನಾಯಕ್ ಎಂ.ರವರು ಮುಕ್ರಂಪಾಡಿ ನಿವಾಸಿಯಾಗಿದ್ದು ಭಾರತೀಯ ಆಗ್ರೋ ಇಂಡಸ್ಟ್ರೀಸ್ನ ಕನ್ಸಲ್ಟೆಂಟ್ ಮತ್ತು ಭಾರತ ಸರಕಾರದ ಗೇರು ಹಾಗೂ ಕೊಕ್ಕೋ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದ ಚೀಫ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶ್ವಕೇಶವ ಕುರುವೇರಿರರು ಮಂಜೇಶ್ವರ ತಾಲೂಕಿನ ಪೈವಳಿಕೆ ನಿವಾಸಿಯಾಗಿದ್ದು ಗೇರು ಕೃಷಿಕರಾಗಿದ್ದಾರೆ. ಅಲ್ಲದೆ ಆಧುನಿಕ ಗೇರು ಸಂಸ್ಕರಣಾ ಘಟಕ ನಡೆಸುತ್ತಿದ್ದಾರೆ. ದೇವಿಪ್ರಸಾದ್ರವರು ಪುಣಚ ಗ್ರಾಮದ ಕಲ್ಲಾಜೆ ನಿವಾಸಿಯಾಗಿದ್ದು ಕೃಷಿಕರಾಗಿದ್ದಾರೆ. ಇವರು ಪುತ್ತೂರು ಸರಸ್ವತಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ.










