






ಪುತ್ತೂರು: ಬಲ್ನಾಡು ಗ್ರಾಮದ ಅಟ್ಲಾರಿನಲ್ಲಿ ಇರುವ ಶ್ರೀ ವನದುರ್ಗೆ, ನಾಗ, ರಕ್ತೇಶ್ವರಿ ಹಾಗೂ ಪರಿವಾರ ದೈವಗಳಿಗೆ ವಾರ್ಷಿಕ ತಂಬಿಲ ಸೇವೆ ಸೋಮವಾರ ನಡೆಯಿತು.


ವೇದಮೂರ್ತಿ ಶಂಕರನಾರಾಯಣ ಭಟ್ ಪರಕ್ಕಜ ಹಾಗೂ ಶ್ರೀಹರಿ ಇವರ ನೇತೃತ್ವದಲ್ಲಿ ತಂಬಿಲಸೇವೆ ನೆರವೇರಿತು. ಈ ಸಂದರ್ಭ ಪರಿವಾರ ದೈವಗಳ ಸಮಿತಿಯ ಪದಾಧಿಕಾರಿಗಳು ಹಾಗೂ ಊರವರು ಭಾಗವಹಿಸಿದ್ದರು.













