







ನೆಲ್ಯಾಡಿ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಗ್ರಾಮ ಪಂಚಾಯತ್ ಬಜತ್ತೂರು ಹಾಗೂ ಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಬಜತ್ತೂರು ಇದರ ಜಂಟಿ ಆಶ್ರಯದಲ್ಲಿ ಕಸೂತಿ ತರಬೇತಿ ಉದ್ಘಾಟನಾ ಸಮಾರಂಭ ಬಜತ್ತೂರು ಸಾವಿತ್ರಿಬಾಯಿ ಪುಲೆ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಜ.5ರಂದು ನಡೆಯಿತು.


ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ್ ಪಿ.ಎನ್., ಅಧ್ಯಕ್ಷತೆ ವಹಿಸಿದ್ದರು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಮಾತನಾಡಿ, ಮಹಿಳೆಯರು ತರಬೇತಿ ಪಡೆದು ಸ್ವ ಉದ್ಯೋಗ ಮಾಡುವಲ್ಲಿ ಗಮನ ಹರಿಸಿ, ಬ್ಯಾಂಕ್ ಸಾಲ ಸೌಲಭ್ಯ ಪಡೆದು ಯಶಸ್ವಿ ಮಹಿಳಾ ಉದ್ಯಮಿದಾರರಾಗಲು ಕರೆ ನೀಡಿದರು. ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ನ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಅವರು ಸ್ವ ಉದ್ಯೋಗದ ನಿಯಮಗಳ ಕುರಿತಾಗಿ ತಿಳಿಸಿ ಮಹಿಳೆಯರು ತಮ್ಮ ಮಾರುಕಟ್ಟೆ ಕೌಶಲ್ಯ ಹೆಚ್ಚಿಸಲು ಹೆಚ್ಚಿನ ಗಮನ ಹರಿಸುವಂತೆ ಹೇಳಿದರು.



ಬಜತ್ತೂರು ಗ್ರಾ.ಪಂ.ಪಿಡಿಒ ಚಿತ್ರಾವತಿ, ಕಾರ್ಯದರ್ಶಿ ಕೊರಗಪ್ಪ, ಬಜತ್ತೂರು ಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ಭವ್ಯ ಡಿ. ಶೆಟ್ಟಿ, ಕೃಷಿಯೇತರ ಚಟುವಟಿಕೆ ತಾಲೂಕು ಅಭಿಯಾನ ನಿರ್ವಹಣೆ ಘಟಕ ಪುತ್ತೂರು ಇದರ ವ್ಯವಸ್ಥಾಪಕಿ ನಳಿನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಪುಸ್ತಕ ಬರಹಗಾರರಾದ ಸುನೀತಾ ನಿರೂಪಿಸಿದರು. ಪಶುಸಖಿ ವಿನೋದ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಮಮತಾ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಜೀವಿನಿ ಸದಸ್ಯರು, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.










