ಸಂಪಾಜೆ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ. ಶಶಾಂಕ ರೈ ಕೆ.ಬಿ. ಮೆಡಿಕಲ್ ಆಫೀಸರ್ ಆಗಿ ಆಯ್ಕೆ

0

ಕೊಡಗು: ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಶಶಾಂಕ ರೈ ಕೆ.ಬಿ.ಯವರು ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಯಲಹಂಕ ಬೆಂಗಳೂರು ಇಲ್ಲಿಗೆ ಮೆಡಿಕಲ್ ಆಫೀಸರ್ ಆಗಿ ಆಯ್ಕೆಯಾಗಿದ್ದಾರೆ. ಇವರು ಮೂಲತಃ ಈಶ್ವರಮಂಗಲ ರವಿಚಂದ್ರ ರೈ ಮತ್ತು ಉಮಾವತಿ ದಂಪತಿಗಳ ಪುತ್ರ. 1ರಿಂದ 10ನೇ ತರಗತಿಯವರೆಗೆ ಈಶ್ವರಮಂಗಲದಲ್ಲಿ ವಿದ್ಯಾಭ್ಯಾಸ, ಪಿಯುಸಿ ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಮಡಿಕೇರಿ ಕಾಲೇಜಿನಲ್ಲಿ ಪೂರೈಸಿದ್ದಾರೆ. ನಂತರ ಸಂಪಾಜೆ ಆರೋಗ್ಯ ಕೇಂದ್ರಕ್ಕೆ ಮೆಡಿಕಲ್ ಆಫೀಸರ್ ಆಗಿ ಆಯ್ಕೆಗೊಂಡು, ಇಲ್ಲಿ 1 ವರ್ಷ 9 ತಿಂಗಳುಗಳ ಕಾಲ ಕರ್ತವ್ಯ ನಿರ್ವಹಿಸಿ, ಜ.12ರಂದು ಬೆಂಗಳೂರಿಗೆ ಕರ್ತವ್ಯಕ್ಕಾಗಿ ತೆರಳಲಿದ್ದಾರೆ.

LEAVE A REPLY

Please enter your comment!
Please enter your name here