








ಪುತ್ತೂರು: ಜಿ.ಎಲ್ ಒನ್ ಪ್ರಾಯೋಜಕತ್ವದಲ್ಲಿ ನಡೆದ ಜಿಎಲ್ ಮಾಲ್ ಉತ್ಸವ್ ವೀಕೆಂಡ್ ವಿಶೇಷ ಕಾರ್ಯಕ್ರಮದಲ್ಲಿ ಗ್ರಾಹಕರಿಗಾಗಿ ಆಯೋಜಿಸಿದ ವಿಸಿಟ್ & ವಿನ್, ರೀಲ್ಸ್ ಚಾಲೆಂಜ್ ಹಾಗೂ ಸೆಲ್ಫಿ ಕಂಟೆಸ್ಟ್ ವಿನ್ನರ್ ವಿಶೇಷ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ಹಸ್ತಾಂತರಿಸಲಾಯಿತು.



ವಿಸಿಟ್ & ವಿನ್ ವಿಜೇತರಾದ ಹರ್ಷಿತ ಕುಮಾರಿ ಮಾಣಿ, ರೀಲ್ಸ್ ಚಾಲೆಂಜ್ ವಿಜೇತರಾದ ಬಿ.ಕಾರ್ತಿಕೇಯ ವಾಗ್ಲೆ ಹಾಗೂ ಸೆಲ್ಫಿ ಕಂಟೆಸ್ಟ್ ವಿನ್ನರ್ ವಿಜೇತರಾದ ಶ್ರೇಯಾ ಪೂಜಾರಿ ಪುತ್ತೂರುರವರಿಗೆ ಜಿ.ಎಲ್.ಸಮೂಹ ಸಂಸ್ಥೆಗಳ ಜನರಲ್ ಮ್ಯಾನೇಜರ್ ಸಂತೋಷ್ ಪುಣಚ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಕೀರ್ತನ್ ಪೂಜಾರಿರವರು ಬಹುಮಾನ ವಿತರಿಸಿದರು.













