







ಕಾಣಿಯೂರು: ಕಾಯಿಮಣ ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಜ 15,16ರಂದು ನಡೆಯಲಿರುವ ವಾರ್ಷಿಕ ಜಾತ್ರೋತ್ಸವದ ಗೊನೆ ಮುಹೂರ್ತವು ಜ 8ರಂದು ನಡೆಯಿತು. ದೇವಸ್ಥಾನದ ಅರ್ಚಕರಾದ ಈಶ್ವರಚಂದ್ರ ಭಟ್ ಅವರು ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಶಿವರಾಮ ಗೌಡ ಅಗಳಿ, ಉದಯ ಕುಮಾರ್ ಅಗಳಿ, ಅಧ್ಯಕ್ಷ ಶ್ರೀಧರ ರೈ ಮಾದೋಡಿ ಹಾಗೂ ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.












