






ಪುತ್ತೂರು: ರೆಂಜಲಾಡಿ ಇಸ್ಲಾಮಿಕ್ ಎಜುಕೇಶನ್ ಸೆಂಟರ್ ಆಶ್ರಯದಲ್ಲಿ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಹಾಗೂ ಅಜ್ಮೀರ್ ಮೌಲೀದ್ ಜ.9ರಂದು ಮಗ್ರಿಬ್ ನಮಾಜಿನ ಬಳಿಕ ಆರ್.ಐ.ಸಿ ವಠಾರದಲ್ಲಿ ನಡೆಯಲಿದೆ.


ಉದ್ಯಮಿ ಆದಂ ಹಾಜಿ ಕಮ್ಮಾಡಿ ಅಧ್ಯಕ್ಷತೆ ವಹಿಸಲಿದ್ದು ಉದ್ಯಮಿ ಅಬ್ದುಲ್ ಖಾದರ್ ಹಾಜಿ ಅಮ್ಚಿನಡ್ಕ ಉದ್ಘಾಟಿಸಲಿದ್ದಾರೆ. ಸಮೀರ್ ಪಾಶಾ ಕೋಲಾರ ಅವರು ವಿಶೇಷ ಅಭ್ಯಾಗತರಾಗಿ ಭಾಗವಹಿಸಲಿದ್ದು ಅಬೂನಜಾ ಉಸ್ತಾದ್ ನೇತೃತ್ವದಲ್ಲಿ ಮಜ್ಲಿಸ್ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಲವಾರು ಉಲಮಾ, ಉಮರಾ ನಾಯಕರು, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದು ಸ್ತ್ರೀಯರಿಗೂ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಆರ್.ಐ.ಸಿ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ತಿಳಿಸಿದ್ದಾರೆ.













