ಮೂಲ ಕೋಟೆ ತರವಾಡು ವತಿಯಿಂದ ಡಾ.ರವೀಶ್ ಪಡುಮಲೆಗೆ ಸನ್ಮಾನ

0

ಪುತ್ತೂರು: ತುಳುನಾಡಿನ ಪ್ರಸಿದ್ಧ ದೈವ ನರ್ತಕ ಹಾಗೂ ಧರ್ಮಸ್ಥಳ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ರವೀಶ್ ಪಡುಮಲೆ ಅವರಿಗೆ ಮೂಲ ಕೋಟೆ ತರವಾಡಿನ ಕುಟುಂಬಸ್ಥರು ಗೌರವ ಸನ್ಮಾನ ನೆರವೇರಿಸಿದರು.
ಇತ್ತೀಚೆಗೆ ನಡೆದ ಕೋಟೆ ತರವಾಡಿನ ಧರ್ಮ ನೇಮೋತ್ಸವದಲ್ಲಿ ಡಾ. ರವೀಶ್ ಪಡುಮಲೆ ಅವರು ದೈವ ನರ್ತನ ಮಾಡಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕುಟುಂಬದವರು ಬಂಗಾರದ ಉಂಗುರ ತೊಡಿಸುವ ಮೂಲಕ ಗೌರವಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೋಟೆ ಗಣೇಶ್ ರೈ ನಾಡಜೆ, ಜಯರಾಮ ರೈ ಮೂಡಂಬೈಲು, ಬಾಲಕೃಷ್ಣ ರೈ ಸುಬ್ರಹ್ಮಣ್ಯ, ನಾರಾಯಣ ರೈ ಮೂಡಂಬೈಲ್, ಪುಷ್ಪರಾಜ್ ಶೆಟ್ಟಿ ಕೋಟೆ, ಸುಬ್ಬಯ್ಯ ರೈ ಕಡಾರ್, ರಮೇಶ್ ರೈ ನೆಟ್ಟಣಿಗೆ, ಲೋಹಿತ್ ಶೆಟ್ಟಿ ಡೆಪ್ಪಾಜೆ, ಪ್ರದೀಪ್ ರೈ ಕಡಬ, ಪ್ರಮೋದ್ ರೈ ಕಡಬ, ಸುಕೇಶ್ ರೈ ಮೊಡಪ್ಪಾಡಿ ಹಾಗೂ ಕೋಟೆ ಬಾರಿಕೆ ಮೂಲಕೋಟೆ ತರವಾಡು ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here