ನಿಡ್ಪಳ್ಳಿ ದೈವಗಳ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

0

ನಿಡ್ಪಳ್ಳಿ; ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇಲ್ಲಿಯ ವರ್ಷಾವಧಿ ಜಾತ್ರೋತ್ಸವ ಜಾತ್ರೋತ್ಸವ ಜ.19 ರಿಂದ 24 ರವರೆಗೆ ನಡೆಯಲಿದ್ದು, ಗೊನೆ ಮುಹೂರ್ತ ಕಾರ್ಯಕ್ರಮ ಜ.10 ರಂದು ನಡೆಯಿತು.

 ಬೆಳಿಗ್ಗೆ ಗುತ್ತು ಚಾವಡಿಯಲ್ಲಿ ಮುಂಡೂರು ವಾಸುದೇವ ಭಟ್ ಪ್ರಾರ್ಥನೆ ಸಲ್ಲಿಸಿದ ನಂತರ ಉಳ್ಳಾಕುಲು ಮೂಲ ಸ್ಥಾನದಲ್ಲಿ ಅಂಗಣಕ್ಕೆ ಹಾರೆ ಹಾಕಲಾಯಿತು. ನಂತರ ವಾಲಗದಲ್ಲಿ  ಬುಳೆನಡ್ಕ ತೋಟಕ್ಕೆ ತೆರಳಿ ಗೊನೆ ಕಡಿಯಲಾಯಿತು.

 ಅನುವಂಶಿಕ ಆಡಳಿತ ಮೊಕ್ತೇಸರರಾದ ಪ್ರವೀಣ್ ಎನ್ ಆರಿಗ ನಿಡ್ಪಳ್ಳಿ ಗುತ್ತು, ಬಾರಿಕೆ ಮನೆಯವರು, ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ, ಮಾಜಿ ಅಧ್ಯಕ್ಷ ನಾರಾಯಣ ರೈ ಮತ್ತು ಸದಸ್ಯರು,ದೈವದ ಪರಿಚಾರಕರು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

     

LEAVE A REPLY

Please enter your comment!
Please enter your name here