ಕಾವು ಕ್ಲಸ್ಟರ್ ಮಟ್ಟದ ಎಫ್. ಎಲ್. ಎನ್ ಕಲಿಕಾ ಹಬ್ಬ 2025-26

0

ಅರಿಯಡ್ಕ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲುಯಲ್ಲಿ‌ ಇಲ್ಲಿ ಜ.8 ರಂದು ಕಾವು ಕ್ಲಸ್ಟರ್ ಮಟ್ಟದ ಎಫ್. ಎಲ್. ಎನ್ ಕಲಿಕಾ ಹಬ್ಬ 2025-26 ನಡೆಯಿತು.

ಈ ಕಾರ್ಯಕ್ರಮವನ್ನು ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಪೆ ಮಜಲು ಇದರ ಎಸ್. ಡಿ .ಎಂ. ಸಿ ಅಧ್ಯಕ್ಷರಾದ ಅಪ್ಪಯ್ಯ ನಾಯ್ಕರವರು ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗೇಶ್ ಪಾಟಾಲಿ ಮತ್ತು ಶಿಕ್ಷಣ ಸಂಯೋಜಕರಾದ ಪುಷ್ಪಾ ರವರು ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು .


ವೇದಿಕೆಯಲ್ಲಿ ಶಾಲಾ ಎಸ್ .ಡಿ.ಎಂ.ಸಿ ಉಪಾಧ್ಯಕ್ಷೆ ನಯನ ಬಳ್ಳಿಕಾನ ಉಪಸ್ಥಿತರಿದ್ದರು . ಕಾವು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ವಿ.ಎಲ್.ಎನ್ ಪ್ರಸಾದ್ ರವರು ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ನುಡಿಗಳನ್ನಾಡಿದರು.

ಮುಖ್ಯ ಶಿಕ್ಷಕಿ ಶಶಿಕಲಾ ಸ್ವಾಗತಿಸಿ,ಸಹ ಶಿಕ್ಷಕರಾದ ಕಿರಣ್ ರಾಜ್ ರವರು ವಂದಿಸಿದರು.ಸಹ ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು
ಈ ಕಾರ್ಯಕ್ರಮದಲ್ಲಿ ಕಾವು ಕ್ಲಸ್ಟರ್ ನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕಲಿಕಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಶಾಲೆಯ ಎಸ್ ಡಿ ಎಮ್ ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿಯವರು ಕಾವು ಕ್ಲಸ್ಟರ್ ನ 12 ಶಾಲೆಗಳ ಶಿಕ್ಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here