ರೋಟರಿ ಪುತ್ತೂರಿನಿಂದ ಕ್ರಿಸ್ಮಸ್, ಹೊಸ ವರ್ಷಾಚರಣೆ

0

ಮಾನವತೆಯ ಮೌಲ್ಯವನ್ನು ಪ್ರತಿಪಾದಿಸಿದವರು ಯೇಸುಕ್ರಿಸ್ತರು-ನೊವೆಲಿನ್ ಡಿ’ಸೋಜ

ಪುತ್ತೂರು: ಯೇಸುಕ್ರಿಸ್ತರ ಜನನವನ್ನು ಸಾರುವ ಕ್ರಿಸ್ಮಸ್ ಹಬ್ಬವನ್ನು ವಿಶ್ವದೆಲ್ಲೆಡೆ ಬಹಳ ಸಡಗರದಿಂದ ಆಚರಿಸಲಾಗುತ್ತದೆ. ಶಾಂತಿ, ಸೌಹಾರ್ದತೆ, ಸಹಬಾಳ್ವೆ, ಸಾಮರಸ್ಯ, ಪ್ರೀತಿಯ ಜೀವನ ನಡೆಸಲು ಕ್ರಿಸ್ಮಸ್ ಹಬ್ಬ ಕರೆಕೊಡುತ್ತಿದ್ದು ಮಾನವತೆಯ ಮೌಲ್ಯವನ್ನು ಪ್ರತಿಪಾದಿಸಿದವರು ಯೇಸುಕ್ರಿಸ್ತರು ಎಂದು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಉಪನ್ಯಾಸಕಿ ನೊವೆಲಿನ್ ನಳಿನಿ ಡಿ’ಸೋಜ ಹೇಳಿದರು.

ಜ.9ರಂದು ಬೊಳ್ವಾರು ಮಹಾವೀರ ವೆಂಚರ್ಸ್ ಸಭಾಂಗಣದಲ್ಲಿ ಜಿಲ್ಲೆಯ ಹಿರಿಯ ಕ್ಲಬ್ ರೋಟರಿ ಕ್ಲಬ್ ಪುತ್ತೂರು ಆಶ್ರಯದಲ್ಲಿ ನಡೆದ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಕ್ಲಬ್ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಮಾತನಾಡಿ, ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿರುವುದರ ಜೊತೆಗೆ ರೋಟರಿ ಸದಸ್ಯರು ಜೀವನದಲ್ಲಿ ಬದ್ಧತೆಯನ್ನು ಮೈಗೂಡಿಸಿಕೊಂಡು  ಸಮಾಜದ ಏಳಿಗೆಗೆ ದುಡಿದವರಾಗಿದ್ದಾರೆ. ಪಂಚಮಂ ಕಾರ್ಯ ಸಿದ್ಧಿ ಎಂಬಂತೆ ಕ್ಲಬ್ ನಲ್ಲಿ ಐವರು ಕ್ರಿಶ್ಚಿಯನ್ ಸದಸ್ಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಪ್ರಾಯೋಜಕತ್ವ ಗೌರವ

ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ ಸದಸ್ಯರಾದ ಡಾ.ಶ್ರೀಪ್ರಕಾಶ್ ಬಿ, ಡಾ.ಜೆ.ಸಿ ಅಡಿಗ, ಡಾ.ಶ್ಯಾಮ್, ಕೇಶವ್ ಅಮೈ, ನಟರಾಜ್ ಎನ್.ಎಸ್, ರಾಮಕೃಷ್ಣ ಕೆ, ಗಿರೀಶ್ ಕೆ.ಎನ್, ಪ್ರಭಾಕರ್ ಎ.ಎಂ, ಬಲರಾಮ ಆಚಾರ್ಯ, ಎಂ.ಜಿ ರೈ, ಕೆ.ವಿಶ್ವನಾಥ, ಸತೀಶ್ ಎಂ, ದತ್ತಾತ್ರೇಯ ರಾವ್, ಸೋಮಶೇಖರ್ ರೈ, ಸತೀಶ್ ಟಿ, ಬಾಲಕೃಷ್ಣ ಆಚಾರ್ಯ, ಸದಾನಂದ ನಾಯ್ಕ್, ಡಾ.ಅಶೋಕ್ ಪಡಿವಾಳ್, ಚಿದಾನಂದ ಬೈಲಾಡಿ, ಭುಜಂಗ ಆಚಾರ್, ಎ.ಜೆ ರೈ, ಝೇವಿಯರ್ ಡಿ’ಸೋಜ, ವಿ.ಜೆ ಫೆರ್ನಾಂಡೀಸ್, ಲೋವಲ್ ಮೇವಾಡ, ಹೆರಾಲ್ಡ್ ಮಾಡ್ತಾ, ಡಾ.ಅವಿಲ್ ಲೆನ್ ಗೊನ್ಸಾಲ್ವಿಸ್, ಸುಬ್ಬಪ್ಪ ಕೈಕಂಬ, ಜೈರಾಜ್ ಭಂಡಾರಿ, ಪಿ.ಡಿ ಕೃಷ್ಣಕುಮಾರ್ ರೈ, ಸುಂದರ ಗೌಡ, ದಾಮೋದರ್ ಕೆ.ಎ, ಡಾ.ರಾಮಕೃಷ್ಣ ರಾವ್, ಡಾ.ನಝೀರ್ ಅಹಮದ್, ಡಾ.ಶ್ರೀಪತಿ ರಾವ್, ಲಕ್ಷ್ಮೀನಾರಾಯಣ ಶೆಟ್ಟಿ, ಡಾ.ಎಂ‌ಎಸ್ ಭಟ್, ವಾಮನ್ ಪೈ, ಡಾ.ಕೆ ಸೀತಾರಾಮ ಭಟ್, ಸುದರ್ಶನ ರಾವ್, ಸುರೇಶ್ ಶೆಟ್ಟಿರವರುಗಳನ್ನು ಗೌರವಿಸಲಾಯಿತು. 

ವೇದಿಕೆಯಲ್ಲಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀಪತಿ ರಾವ್, ನಿಯೋಜಿತ ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್ ಉಪಸ್ಥಿತರಿದ್ದರು. ಕ್ಲಬ್ ಕಾರ್ಯದರ್ಶಿ ಪ್ರೊ|ಸುಬ್ಬಪ್ಪ ಕೈಕಂಬ ಮಾಸಿಕ ವರದಿ ಮಂಡಿಸಿದರು. ಪೂರ್ವಾಧ್ಯಕ್ಷ ವಿ.ಜೆ ಫೆರ್ನಾಂಡೀಸ್ ಸ್ವಾಗತಿಸಿ, ಅತಿಥಿಗಳ ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ಪೂರ್ವಾಧ್ಯಕ್ಷ ಪ್ರೊ.ಝೇವಿಯರ್ ಡಿ’ಸೋಜರವರು ಪ್ರಾಯೋಜಕತ್ವ ವಹಿಸಿದವರ ಹೆಸರನ್ನು ಓದಿ ವಂದಿಸಿದರು.

ಕೇಕ್ ಕತ್ತರಿಸುವಿಕೆ ಸಂಭ್ರಮ
ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಪ್ರಯುಕ್ತ ಕ್ಲಬ್ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಸಹಿತ ಅತಿಥಿ ಗಣ್ಯರು ಹಾಗೂ ಕ್ಲಬ್ ನಲ್ಲಿನ ಕ್ರಿಶ್ಚಿಯನ್ ಸದಸ್ಯರಾದ ಪ್ರೊ.ಝೇವಿಯರ್ ಡಿ’ಸೋಜ, ವಿ.ಜೆ ಫೆರ್ನಾಂಡೀಸ್, ಲೋವಲ್ ಮೇವಾಡ, ಹೆರಾಲ್ಡ್ ಮಾಡ್ತಾ, ಡಾ.ಅವಿಲ್ ಲೆನ್ ಗೊನ್ಸಾಲ್ವಿಸ್ ರವರು ಒಗ್ಗೂಡಿ ಸಿಹಿಯ ಪ್ರತೀಕವಾಗಿರುವ ಸಂಭ್ರಮದ ಕೇಕ್ ಕತ್ತರಿಸಿ ಸಂತೋಷ ಹಚ್ಚಿಕೊಂಡರು. 

ಅಭಿನಂದನೆ
ಕ್ಲಬ್ ಸರ್ವಿಸ್ ನಡಿಯಲ್ಲಿ  ಹೊಸ ಸದಸ್ಯರಾಗಿ ಅವೆನ್ಯೂ ಕಂಪ್ಯೂಟರ್ಸ್ ಮಾಲಕ ಅನಿಲ್ ಕುಮಾರ್ ಒತ್ತೆಮುಂಡೂರುರವರಿಗೆ ಕ್ಲಬ್ ಅಧ್ಯಕ್ಷರು ಹೂ ನೀಡಿ ಕ್ಲಬ್ ಗೆ ಸ್ವಾಗತಿಸಲಾಯಿತು. ಅದೇ ರೀತಿ ಇತ್ತೀಚೆಗೆ ಹಸೆಮಣೆ ಏರಿದ ಕ್ಲಬ್ ಸದಸ್ಯರಾದ ಡಾ.ಅವಿಲ್ ಲೆನ್ ಗೊನ್ಸಾಲ್ವಿಸ್ ದಂಪತಿಗೆ ಹೂಗುಚ್ಛ ನೀಡಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here