ಸಜಂಕಾಡಿ: ಸ.ಹಿ.ಪ್ರಾ ಶಾಲೆಯ ‘ಇಕೋ ಕ್ಲಬ್ ‘ವತಿಯಿಂದ ಕಿರುನಾಟಕ ಹಾಗೂ ಜಾಗೃತಿ ಗೀತೆಗಳ ಮೂಲಕ‌ ಪರಿಸರ ಜಾಗೃತಿ ಕಾರ್ಯಕ್ರಮ

0

ಪುತ್ತೂರು: ಸ.ಹಿ‌ಪ್ರಾ ಶಾಲೆ ಸಜಂಕಾಡಿಯ ಇಕೋ ಕ್ಲಬ್ ವತಿಯಿಂದ ಪರಿಸರ ಜಾಗೃತಿ ಕುರಿತಾದ ಕಿರುನಾಟಕ ಪ್ರದರ್ಶನ ಹಾಗೂ ಜಾಗೃತಿ ಗೀತೆಗಳ ಗಾಯನ ನಡೆಯಿತು.

ಮಕ್ಕಳ ರಂಗಭೂಮಿ‌ ಕಲಾವಿದ ,ನಾಟಕ ನಿರ್ದೇಶಕ ರೊ.ಮೌನೇಶ್ ವಿಶ್ವಕರ್ಮ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ “ಇರುವುದೊಂದೇ ಭೂಮಿ ,ಅದನ್ನು ಉತ್ತಮ ವಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು .ವಿದ್ಯಾರ್ಥಿಗಳು ಇವರ ಮಾರ್ಗದರ್ಶನ ದಲ್ಲಿ ಪರಿಸರ ಜಾಗೃತಿ ಮೂಡಿಸುವ ಎರಡು ಕಿರುನಾಟಕಗಳನ್ನು ಪ್ರಸ್ತುತ ಪಡಿಸಿದರು .ಬಳಿಕ ಜಾಗೃತಿ ಗೀತೆಗಳನ್ನು ಹಾಡಿಸಿದರು .ವೇದಿಕೆಯಲ್ಲಿ ಶಾಲಾ ಪ್ರಭಾರ ಮುಖ್ಯಗುರು ಶ್ರೀಮತಿ ಸುಮಲತಾ ಪಿ‌.ಕೆ ಹಾಗೂ ಇಕೋ ಕ್ಲಬ್ ವಿದ್ಯಾರ್ಥಿ ಪ್ರತಿನಿಧಿ ಜೈಪ್ರೀತ್ ಉಪಸ್ಥಿತರಿದ್ದರು .ಅತಿಥಿ ಶಿಕ್ಷಕಿ ಆಯಿಷತ್ ಮಿಸ್ರಿಯಾ ವಂದಿಸಿದರು .ಪದವೀಧರ ಶಿಕ್ಷಕ ಗಣೇಶ ನಾಯಕ್ ಪುತ್ತೂರು ಕಾರ್ಯಕ್ರಮ‌ ನಿರ್ವಹಿಸಿದರು.

LEAVE A REPLY

Please enter your comment!
Please enter your name here