ನೆಕ್ಕಿಲಾಡಿಯಲ್ಲಿ ಅಶೋಕ ಜನ- ಮನದ ಉಡುಗೊರೆ ವಿತರಣೆ ಕಾರ್ಯಕ್ರಮ

0

ಉಪ್ಪಿನಂಗಡಿ: ರೈ ಎಸ್ಟೇಟ್ ಎಜ್ಯುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಸಕ, ಟ್ರಸ್ಟ್‌ನ ಪ್ರವರ್ತಕ ಅಶೋಕ್ ಕುಮಾರ್ ರೈ ಕೆ.ಎಸ್. ಅವರ ನೇತೃತ್ವದಲ್ಲಿ ‘ಅಶೋಕ ಜನ- ಮನ- 2025’ ಕಾರ್ಯಕ್ರಮದ ಉಡುಗೊರೆ ವಿತರಣೆ ಕಾರ್ಯಕ್ರಮ 34 ನೆಕ್ಕಿಲಾಡಿಯಲ್ಲಿ ಜ.11ರಂದು ನಡೆಯಿತು.


ಉಡುಗೊರೆ ವಿತರಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, 2025ರ ಅ.20ರಂದು ನಡೆದ ಅಶೋಕ ಜನ- ಮನ ಕಾರ್ಯಕ್ರಮದಲ್ಲಿ ಜನಸಂದಣಿ ಹಾಗೂ ಮಳೆಯ ಅಡಚಣೆಯಿಂದಾಗಿ ಹಲವರು ಉಡುಗೊರೆ ಸಿಗದೆ ವಂಚಿತರಾಗಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ಉಡುಗೊರೆಯನ್ನು ವಿತರಿಸಲು ನಿರ್ಧರಿಸಲಾಗಿದೆ. ದೀಪಾವಳಿ ಸಮಯದಲ್ಲಿ ವಸ್ತ್ರ ವಿತರಣಾ ಕಾರ್ಯಕ್ರಮವನ್ನು ನಾನು ಕಳೆದ 13 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಮೊದಲಿಗೆ ಸುಮಾರು 25 ಜನರಿಂದ ಈ ಕಾರ್ಯಕ್ರಮ ಆರಂಭಗೊಂಡಿತ್ತು. ಕಳೆದ ದೀಪಾವಳಿಯ ಸಂದರ್ಭ ಒಂದು ಲಕ್ಷ ಜನರಿಗೆ ಉಡುಗೊರೆಯನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಆ ಕಾರ್ಯಕ್ರಮಕ್ಕೆ ಬಂದಿದ್ದರು. ಅದರೆ ಅಂದಿನ ಜನಸಂದಣಿ ಹಾಗೂ ಮಳೆಯಿಂದಾಗಿ ಹಲವರಿಗೆ ಉಡುಗೊರೆ ಸಿಗಲಿಲ್ಲ ಎಂಬ ವಿಷಾಧವಿದೆ. ನಾನು ಮಾಡುತ್ತಿರುವ ಸಮಾಜಸೇವೆ ಯಾವುದೇ ಪ್ರತಿಫಲಾಪೇಕ್ಷೆಯಿಂದಲ್ಲ. ನಾನು ದುಡಿದ ಒಂದಂಶವನ್ನು ಈ ಸಮಾಜಕ್ಕೆ ಅರ್ಪಿಸಬೇಕು. ಜನರ ಪ್ರೀತಿ ಗಳಿಸಬೇಕೆಂಬ ಉದ್ದೇಶದಿಂದ ಮಾತ್ರ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರಕ್ಕೆ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಪಂಚಗ್ಯಾರಂಟಿ ಯೋಜನೆಗಳು ಅರ್ಹರ ಮನೆಯನ್ನು ತಲುಪುತ್ತಿವೆ. ಇದರಿಂದ ಬಡ ಕುಟುಂಬಕ್ಕೆ ಚೈತನ್ಯ ಶಕ್ತಿಯನ್ನು ನೀಡಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಈ ಬಾರಿ 7.5 ಕೋ.ರೂ.ವನ್ನು ಕಾಯ್ದಿರಿಸಲಾಗಿದೆ. ನಾನು ಶಾಸಕನಾದ ಬಳಿಕ ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು, ಶುದ್ಧ ಕುಡಿಯುವ ನೀರಿಗಾಗಿ 1006 ಕೋ.ರೂ. ಅನುದಾನ, ಮೈದಾನ, ಆರ್‌ಟಿಒ ಟ್ರಾಕ್, ದೇವಾಲಯಗಳ ಅಭಿವೃದ್ಧಿ ಸೇರಿದಂತೆ ಹಲವು ಪುತ್ತೂರನ್ನು ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸುವಲ್ಲಿ ಹಲವು ಯೋಜನೆಗಳು ಮಂಜೂರಾಗಿವೆ. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಮಗ್ರ ಅಭಿವೃದ್ಧಿಗೂ ಯೋಜನೆ ರೂಪಿಸಲಾಗಿದೆ ಉಪ್ಪಿನಂಗಡಿ ಮತ್ತು ಹಿರೇಬಂಡಾಡಿಯ ಜೈನ ಬಸದಿಗಳ ಅಭಿವೃದ್ಧಿಗಾಗಿ ತಲಾ ಒಂದು ಕೋ.ರೂ. ಅನುದಾನವನ್ನು ನೀಡಲಾಗಿದೆ. ವಸತಿ ರಹಿತರಿಗೆ ನಿವೇಶನಕ್ಕಾಗಿ 300 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ನಿವೇಶನರಹಿತರು ನಿಮ್ಮ ಗ್ರಾಮದಲ್ಲಿ ಜಾಗವಿಲ್ಲದಿದ್ದರೂ ಬೇರೆ ಗ್ರಾಮ ಪಂಚಾಯತ್‌ನಲ್ಲೂ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ನಾಡಿನ ಬಡವರಿಗೆ ಕಾಂಗ್ರೆಸ್ ಸರಕಾರವು ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದು, ನಮ್ಮ ಸರಕಾರದ ಉತ್ತಮ ಕೆಲಸಕ್ಕೆ ಮುಂದೆಯೂ ನೀವೆಲ್ಲಾ ಆಶೀರ್ವಾದ ಮಾಡಬೇಕು ಎಂದರು.


ವೇದಿಕೆಯಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಡಾ. ರಘು, ಉಪ್ಪಿನಂಗಡಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಸ್ಕರ್ ಅಲಿ, ಉಪಾಧ್ಯಕ್ಷ ಡೆನಿಸ್, ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಟ್ರಸ್ಟ್‌ನ ಕಾರ್ಯಧ್ಯಕ್ಷ ಸುದೇಶ್ ಆರ್. ಶೆಟ್ಟಿ, ಅಕ್ರಮ- ಸಕ್ರಮ ಸಮಿತಿಯ ಸದಸ್ಯ ರಾಮಣ್ಣ ಪಿಲಿಂಜ , ಆರೋಗ್ಯ ಸಮಿತಿ ಸದಸ್ಯೆ ಜಯಶೀಲ ಶೆಟ್ಟಿ, ಜತೀಂದ್ರ ಶೆಟ್ಟಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ನಿಕಟಪೂರ್ವ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಮ್ಮೂರು- ನಮ್ಮವರು ಸಂಘಟನೆಯ ಅಧ್ಯಕ್ಷ ಪುರುಷೋತ್ತಮ ನಾಯ್ಕ, ಪ್ರಮುಖರಾದ ಜತೀಂದ್ರ ಶೆಟ್ಟಿ, ಯೊಗೀಶ್ ಸಾಮಾನಿ, ರಾಜೇಶ್ ನೆಕ್ಕಿಲಾಡಿ, ಅಹಮ್ಮದ್ ರಫೀಕ್, ಶಬೀರ್ ಅಹಮ್ಮದ್ ನೆಕ್ಕಿಲಾಡಿ, ಜೆರಾಲ್ಡ್ ಡಿಸೋಜ, ಆನಂದ ಸಾಂತ್ಯಡ್ಕ, ಖಾದರ್ ನೆಕ್ಕಿಲಾಡಿ ಮತ್ತಿತರರು ಉಪಸ್ಥಿತರಿದ್ದರು.
ಬೂತ್ ಅಧ್ಯಕ್ಷ ಹಮೀದ್ ಪಿ.ಟಿ. ಸ್ವಾಗತಿಸಿದರು. 34 ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್ ವಂದಿಸಿದರು. ಬ್ಲಾಕ್ ಅಧ್ಯಕ್ಷರಾದ ಇಸಾಕ್, ಖಾದರ್ ಆದರ್ಶನಗರ ಉದ್ಯಮಿಗಳಾದ ಸಾದಿಕ್, ಉಲ್ಲಾಸ್ ಸಹಕರಿಸಿದರು.

LEAVE A REPLY

Please enter your comment!
Please enter your name here