ಜ.14: ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ -ಧರ್ಮದೈವಗಳಿಗೆ ತಂಬಿಲ

0

ಬೆಟ್ಟಂಪಾಡಿ: ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಮತ್ತು ಕುಟುಂಬದ ಧರ್ಮದೈವಗಳ ವಾರ್ಷಿಕ ತಂಬಿಲವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಹಾಗು ಬ್ರಹ್ಮಶ್ರೀ ದಿನೇಶ್‌ ಮರಡಿತ್ತಾಯ ಗುಮ್ಮಟೆದ್ದೆಯ ಯವರ ನೇತೃತ್ವದಲ್ಲಿ ಜ.14ರಂದು ಜರಗಲಿದೆ.


ಪ್ರಾತಃಕಾಲ ಧನುಪೂಜೆ, ಬಳಿಕ ಬೈಲಾಡಿ ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ, ದೇವಾಲಯದಲ್ಲಿ ಗಣಪತಿ ಹೋಮ, ದೇವತಾ ಪ್ರಾರ್ಥನೆ, ಸತ್ಯನಾರಾಯಣ ದೇವರ ಪೂಜೆ, ಶ್ರೀ ವನದುರ್ಗಾ ದೇವಿ ಮಹಾಪೂಜೆ, ಶ್ರೀ ಶಾಸ್ತಾವು ದೇವರ ಮಹಾಪೂಜೆ, ಗುರು ಪೂಜೆ, ಉಳ್ಳಾಕುಲು ಮತ್ತು ಗುಳಿಗ ದೈವಗಳ ತಂಬಿಲ ನಡೆಯಲಿದೆ. ಬೆಳಿಗ್ಗೆ ಕೇಸರಿ ಭಜನಾ ತಂಡ ಮಿತ್ತಡ್ಕ ಬೆಟ್ಟಂಪಾಡಿ ಇವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ ನಡೆದು ಸಂಜೆ ಬೈಲಾಡಿ ಮನೆಯಲ್ಲಿ ಕುಟುಂಬದ ಧರ್ಮದೈವಗಳ ತಂಬಿಲ ನಡೆಯಲಿದೆ ಎಂದು ಬೈಲಾಡಿ ಕುಟುಂಬಿಕರ ಪ್ರಕಟಣೆ ತಿಳಿಸಿದೆ. 

LEAVE A REPLY

Please enter your comment!
Please enter your name here