







ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಅರಿಯಡ್ಕ ವಲಯ ಭಜನೋತ್ಸವ ಮತ್ತು ಬಡಗನ್ನೂರು ಎ ಒಕ್ಕೂಟ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡಗನ್ನೂರು ಒಕ್ಕೂಟ ಸ್ವ-ಸಹಾಯ ಸಂಘದ ಸದಸ್ಯರಿಂದ ಸ್ವಚ್ಛತಾ ಕಾರ್ಯ ಶ್ರಮದಾನದ ಮೂಲಕ ನಡೆಯಿತು.


ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಂಕರಿ ಪಟ್ಟೆ, ಶ್ರೀಮತಿ ಕನ್ನಡ್ಕ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ವಾಣಿಶ್ರೀ ಪಡುಮಲೆ, ಸೇವಾಪ್ರತಿನಿಧಿಗಳು ಮತ್ತು ಸ್ವ-ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.













