







ದ.ಕನ್ನಡ ಜಿಲ್ಲಾ ಕೃಷಿಕ ಸಮಾಜ ನೇತೃತ್ವದಲ್ಲಿ ಸುದ್ದಿ ಮಾಹಿತಿ ಟ್ರಸ್ಟ್,ಸುದ್ದಿ ಅರಿವು ಕೇಂದ್ರದ ಸಹಯೋಗದೊಂದಿಗೆ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಗದ್ದೆಯಲ್ಲಿ ನಡೆಯುತ್ತಿರುವ ಸಸ್ಯ ಜಾತ್ರೆಗೆ ಇಂದು (ಜ.12) ಕೊನೆಯ ದಿನ. ಬನ್ನಿ… ಮಾಹಿತಿ ಸವಲತ್ತು, ಸೌಲಭ್ಯಗಳನ್ನು ಪಡೆಯಿರಿ. ಖರೀದಿಸಿರಿ.



ಸುದ್ದಿ ಪತ್ರಿಕೆ ಮತ್ತು ಸುದ್ದಿ ಚಾನೆಲ್‌ನಲ್ಲಿ ಅದರ ವಿವರ, ಹೈಲೈಟ್‌ಗಳು ಬಂದಿದೆ. ಸುದ್ದಿ ಅರಿವು ಕೇಂದ್ರದಲ್ಲಿ ಸಸ್ಯ ಜಾತ್ರೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಟಾಲ್‌ಗಳ ಮಾಹಿತಿ, ಸೇವೆ, ಸೌಲಭ್ಯಗಳು ಮತ್ತು ವಸ್ತುಗಳ ವಿವರ ದೊರೆಯಲಿದೆ. ಈ ಜಾತ್ರೆ ಕಳೆದ ಮೇಲೆ ಅವುಗಳನ್ನು ಸುದ್ದಿ ಅರಿವು ಕೇಂದ್ರದಲ್ಲಿ ಪಡೆಯುವ ವ್ಯವಸ್ಥೆಯನ್ನು ಏರ್ಪಡಿಸಲಿದ್ದೇವೆ.
ಅದರೊಂದಿಗೆ ದ.ಕ ಜಿಲ್ಲೆಯಲ್ಲಿರುವ ಎಲ್ಲಾ ಕೃಷಿ ನರ್ಸರಿಗಳ ವಿವರಗಳನ್ನು ಅಲ್ಲಿ ದೊರಕುವ ಗಿಡಗಳ ಮಾಹಿತಿಯನ್ನು ಮತ್ತು ಬುಕ್ಕಿಂಗ್ ವ್ಯವಸ್ಥೆಯನ್ನು ಏರ್ಪಡಿಸಲಾಗುವುದು.










