






ಬಡಗನ್ನೂರು: ಇತಿಹಾಸ ಪ್ರಸಿದ್ಧ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ ಜ.12ರಿಂದ 14 ರ ತನಕ ವಿಜೃಂಭಣೆಯಲ್ಲಿ ನಡೆಯಲಿದ್ದು, ಇದರ ಪ್ರಯುಕ್ತ ಹಸಿರು ಹೊರಕಾಣಿಕೆ ಸಮಾರ್ಪಣೆ ಜ.12ರಂದು ನಡೆಯಿತು.



ಬೆಳಗ್ಗೆ 9ರಿಂದ ಬಲಿವಾಡು ಶೇಖರಣೆ ಹಸಿರುವಾಣಿ ಹೊರೆಕಾಣಿಕೆ ಸಂಗ್ರಹಣೆ ನಡೆದು ಸಂಜೆ ಉಗ್ರಾಣ ತುಂಬಿಸುವುದು, ಮಹಾಪೂಜೆ, ಮಹಾಗಣಪತಿ ಪೂಜೆ, ಅತ್ತಾಳಪೂಜೆ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಿತು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ಬಿ. ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಿತು.



ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಸದಸ್ಯರಾದ ಜನಾರ್ದನ ಪೂಜಾರಿ ಪದಡ್ಕ, ಶ್ರೀನಿವಾಸ ಗೌಡ ಕನ್ನಯ, ಉದಯ ರಾವ್ ಪಡುಮಲೆ,ಪುರಂದರ ರೈ ಕುದ್ಕಾಡಿ ಶಂಕರಿ ಪಟ್ಟೆ, ಗೋಪಾಲ ನಾಯ್ಕ ದೊಡ್ಡಡ್ಕ, ಶ್ರೀಮತಿ ಕನ್ನಡ್ಕ, ಹಾಗೂ ಊರಪರವೂರ ಭಕ್ತಾದಿಗಳು ಭಾಗವಹಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಶ್ವಗುರು ಭರತನಾಟ್ಯ ಮತ್ತು ಸಂಗೀತ ಕಲಾ ಶಾಲೆ ಕುರಿಯ ಇವರಿಂದ ವಿದುಷಿ ಭಾಗ್ಯಶ್ರೀ ರೈ, ವಿಂದ್ಯಾಶ್ರೀ ರೈ ನಿರ್ದೇಶಕನದಲ್ಲಿ “ನೃತ್ಯಾಂಜಲಿ” ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಇಂದು 13ರಂದು ಬೆಳಗ್ಗೆ ಗಂ 6.30ಕ್ಕೆ ಕ್ಷೇತ್ರಕ್ಕೆ ತಂತ್ರಿಗಳ ಆಗಮನ 7ಕ್ಕೆ ಶ್ರೀ ಕ್ಷೇತ್ರದ ಮೂಲಸ್ಥಾನ ಪವಿತ್ರ ತೀರ್ಥದ ಕಲ್ಲಿನಿಂದ ಶಂಖ, ಜಾಗಟೆ, ವಾದ್ಯಮೇಳದೊಂದಿಗೆ ತೀರ್ಥ ತರಲು ಹೊರಟು, 8ರಿಂದ ಮಹಾಗಣಪತಿ ಹವನ, ನವಕಾಭಿಷೇಕ, 10.30ರಿಂದ ತುಲಾಭಾರ ಸೇವೆ, ಮಹಾಪೂಜೆ, ಪಲ್ಲಪೂಜೆ, ಬಲಿಹೊರಡುವುದು, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ಸಂಜೆ ಗಂ 5.30ರಿಂದ ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ ಸೇವೆ, 6.30ರಿಂದ ಶ್ರೀ ದೇವರ ಉತ್ಸವ ಬಲಿ, ಶ್ರೀ ಭೂತ ಬಲಿ, ನೃತ್ಯಬಲಿ, ಕಟ್ಟೆ ಪೂಜೆ (ವಸಂತ ಕಟ್ಟೆ ಪೂಜೆಯಲ್ಲಿ ಕಟ್ಟೆ ಪೂಜೆ ಮಾಡಿಸುವವರಿಗೆ ಅವಕಾಶವಿದೆ) ಸುಡುಮದ್ದು ಪ್ರದರ್ಶನ ಅನ್ನಪ್ರಸಾದ ವಿತರಣೆ ನಡೆಯಲಿದೆ.










