ಸಾಯಿಕಲಾ ಯಕ್ಷಬಳಗದಿಂದ ಶ್ರೀನಿವಾಸ ಕಲ್ಯಾಣ ಯಕ್ಷಗಾನ

0

ಪುತ್ತೂರು: ಮುಂಡೋಡಿ ಕಲ್ಕಾರು ನವಶಕ್ತಿ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್‌ನ 34ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನವಶಕ್ತಿ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಶ್ರೀ ದುರ್ಗಾ ನಮಸ್ಕಾರ ಪೂಜೆಯ ಸಂದರ್ಭದಲ್ಲಿ ಸಾಯಿಕಲಾ ಯಕ್ಷಬಳಗ ಡಾ|ಶಿವರಾಮ ಕಾರಂತ ಬಾಲವನದವರಿಂದ ಶ್ರೀನಿವಾಸ ಕಲ್ಯಾಣ ಯಕ್ಷಗಾನ ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ರಚನ ಚಿದ್ಗಲ್, ಚೆಂಡೆಮದ್ದಳೆಯಲ್ಲಿ ಸುಬ್ರಹ್ಮಣ್ಯ ಭಟ್ ವಳಕುಂಜಾ, ಬಾಲಸುಬ್ರಹ್ಮಣ್ಯ ಗುತ್ತಿಗಾರು, ಗಗನ್ ಪಂಜ, ಕೃಷ್ಣ ಚೈತಣ್ಯ ಚೇರಲು, ಚಕ್ರತಾಳದಲ್ಲಿ ಪುರುಷೋತ್ತಮ ಸುಳ್ಯ ಸಹಕರಿಸಿದರು.


ಮುಮ್ಮೇಳದಲ್ಲಿ ಬೃಗುವಾಗಿ ಭವಿಷ್ ಭಂಡಾರಿ, ಶ್ರೀನಿವಾಸನಾಗಿ ಪ್ರೇಮಾ ಕಿಶೋರ್, ಲಕ್ಷ್ಮೀಯಾಗಿ ಪ್ರಸಕ್ತ ರೈ ಸರೋಲಿ, ವೃಷಭಾಸುರನಾಗಿ ಸಂದೇಶ್ ದೀಪ್ ರೈ ಕಲ್ಲಂಗಳ, ದೇವೇಂದ್ರನಾಗಿ ಚೈತಾಲಿ ಕಾಂಚೋಡು, ದ್ವಾರಪಾಲಕನಾಗಿ ಅವನೀಶ ಸಂಪಾಜೆ, ವರಾಹನಾಗಿ ಶ್ರುತಿ ವಿಸ್ಮಿತ್ ಬಲ್ನಾಡು, ಚೋಳ ರಾಜನಾಗಿ ಜ್ಯೋತಿ ಅಶೋಕ್ ಕೆದಿಲ, ಕಿರಾತ ಶ್ರೀನಿವಾಸನಾಗಿ ಪೃಥ್ವಿ ಶೆಟ್ಟಿ ಕಾಟುಕುಕ್ಕೆ, ಸಖನಾಗಿ ಭವಿಷ್ ಭಂಡಾರಿ, ಪದ್ಮಾವತಿಯಾಗಿ ಮಿಥುಲ್ ಪಂಜ, ಸಖಿಯಾಗಿ ಅವನೀಶ ಸಂಪಾಜೆ, ಪ್ರಸಕ್ತ ರೈ ಸರೋಲಿ, ಆಕಾಶರಾಯನಾಗಿ ಡಾ. ಅನನ್ಯಲಕ್ಷ್ಮೀ ಸಂದೀಪ್, ಭಕುಳೆಯಾಗಿ ಅವನೀಶ್ ಸಂಪಾಜೆ, ಕೊರವಂಜಿಯಾಗಿ ಶ್ರುತಿ ವಿಸ್ಮಿತ್ ಬಲ್ನಾಡ್, ಧರಣಿ ದೇವಿಯಾಗಿ ಶಿಲ್ಪಾ ಉದ್ಯಾವರ ಪಾತ್ರ ನಿರ್ವಹಿಸಿದರು.

LEAVE A REPLY

Please enter your comment!
Please enter your name here