ಜೆಸಿಐ ಪುತ್ತೂರು ಘಟಕದ 2026ನೇ ಸಾಲಿನ ಘಟಕ ಸಮಿತಿ ರಚನೆ

0

ಜ.15ರಂದು ನೂತನ ಆಡಳಿತ ಮಂಡಳಿಯ ಪದಗ್ರಹಣ

ಪುತ್ತೂರು: ಜೆಸಿಐ ಪುತ್ತೂರು ಘಟಕದ 2026ನೇ ಸಾಲಿನ ಘಟಕ ಸಮಿತಿ ರಚನೆಯಾಗಿದ್ದು ಘಟಕಾಧ್ಯಕ್ಷರಾಗಿ ಜಿತೇಶ್ ರೈ ಸಿ.ಎಚ್., ಕಾರ್ಯದರ್ಶಿಯಾಗಿ ಹರ್ಷಿತಾ ಬೆಜ್ಜಂಗಳ, ಕೋಶಾಧಿಕಾರಿಯಾಗಿ ಸತೀಶ್ ನಾಯ್ಕ್, ಜ್ಯೂನಿಯರ್ ಜೇಸಿ ಚೇರ್‌ಪರ್ಸನ್ ಆಗಿ ಸಂಪ್ಯದ ದೀಕ್ಷಿತಾ. ಎ. ಸಿ ರವರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಪ್ರಜ್ವಲ್ ರೈ ಸೊರಕೆ (ಮ್ಯಾನೇಜ್ಮೆಂಟ್),ನರಸಿಂಹ ಪೈ (ಟ್ರೈನಿಂಗ್),ರಮ್ಯಾ ಭಾಗ್ಯೇಶ್ ರೈ (ಕಮ್ಯೂನಿಟಿ ಅಂಡ್ ಡೆವಲಪ್ಮೆಂಟ್),ಗೌರವ್ ಭಾರಧ್ವಾಜ್ (ಗ್ರೋತ್ ಆಂಡ್ ಡೆವಲಪ್ ಮೆಂಟ್) ಸಾಯಿರಾಂ ಬಾಳಿಲ (ಪಿ ಆರ್ ಆಂಡ್ ಮಾರ್ಕೆಟಿಂಗ್),ಮನೋಹರ್ ಪಾಟಾಳಿ (ಬ್ಯುಸಿನೆಸ್) ಹಾಗೂ ಸುಜನ್ ಕೇವಳ (ಜೊತೆ ಕಾರ್ಯದರ್ಶಿ),ರಂಜಿನಿ ಶೆಟ್ಟಿ (ಲೇಡಿ ಜೆಸಿ ಕೊ ಆರ್ಡಿನೇಟರ್) ಜಗನ್ನಾಥ ಅರಿಯಡ್ಕ (ಜೆ ಜೇ ಸಿ ವಿಂಗ್ ಕೋ ಆರ್ಡಿನೆಟರ್), ನಿರ್ದೇಶಕರಾಗಿ ಸುಹಾಸ್ ರೈ, ಸ್ವಾತಿ ಶಶಿರಾಜ್ ರೈ,ಶಿಲ್ಪ ಪಿ ಶೆಟ್ಟಿ,ಮಾನಸ ,ಸುಪ್ರೀತ್ ಕೆಸಿ,ಶರತ್ ಶ್ರೀನಿವಾಸ್, ವಿಘ್ನೇಶ್ ನಾಯ್ಕ್,ಸಂದೀಪ್ ರೈ,ವಿರೂಪಾಕ್ಷ ಭಟ್,ಆಶಾ ಮೋಹನ್,ಶೋಭಾ ರೈ, ಸತ್ಯಶಂಕರ್,ಪ್ರಜ್ವಲ್ ಡಿಸೋಜ,ಸಂದೇಶ್ ಪಿ ಎಸ್,ಸಂದೇಶ್ ರೈ ಅಶ್ವಿನಿ ಸಂಪ್ಯ ಆಯ್ಕೆಯಾದರು.

ನಾಳೆ ಪದಗ್ರಹಣ:
ರೋಟರಿ ಮನಿಷಾ ಸಭಾಂಗಣದಲ್ಲಿ ಜ.15ರಂದು ನೂತನ ಆಡಳಿತ ಮಂಡಳಿಯ ಪದಗ್ರಹಣ ನಡೆಯಲಿದೆ.

ಜಿತೇಶ್ ರೈ:
54 ವರ್ಷಗಳ ಇತಿಹಾಸ ಇರುವ ಜೇಸಿಐ ಪುತ್ತೂರು ಘಟಕದ 55 ನೇ ಅಧ್ಯಕ್ಷರಾಗಿ ಜಿತೇಶ್ ರೈ ಆಯ್ಕೆಯಾಗಿದ್ದಾರೆ. ರಮೇಶ್ ರೈ ಕೆಯ್ಯೂರು ಮತ್ತು ರಾಜೀವಿ ರೈ ಚಾವಡಿ ಹೊಸಮನೆ ದಂಪತಿ ಪುತ್ರನಾಗಿರುವ ಇವರು ಪ್ರಾಥಮಿಕ ಪ್ರೌಡ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣವನ್ನು ತನ್ನ ಹುಟ್ಟೂರು ಕೆಯ್ಯೂರಲ್ಲೇ ಪೂರೈಸಿ, ಬೊಳ್ವಾರ್ ಇಂಡಸ್ ಕಾಲೇಜ್‌ನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಎಂಬ ವಿಷಯದಲ್ಲಿ ಪದವಿ ಪಡೆದಿರುತ್ತಾರೆ. ಬಳಿಕ MBA IN HR ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪೊರೈಸಿರುತ್ತಾರೆ. ಆ ಬಳಿಕ 7ವರ್ಷಗಳ ಕಾಲ ಕ್ಯಾಡ್ ಸೆಂಟರ್ ಪುತ್ತೂರು ಇಲ್ಲಿ ಸೆಂಟರ್ ಮ್ಯಾನೇಜರ್ ಹುದ್ದೆ ಪೂರೈಸಿ ಪ್ರಸ್ತುತ ಟಾಟಾ ಎ ಐ ಎ ಯಲ್ಲಿ ಉದ್ಯೋಗಿಯಾಗಿದ್ದಾರೆ.

2019ನೇ ಇಸವಿಯಲ್ಲಿ ಜೆಸಿಐ ಪುತ್ತೂರು ಘಟಕಕ್ಕೆ ಸೇರ್ಪಡೆಗೊಂಡ ಇವರು 2020ನೇ ಸಾಲಿನಲ್ಲಿ ಜೊತೆಕಾರ್ಯದರ್ಶಿ ಹುದ್ದೆ ಪಡೆದರು.2021ನೇ ಸಾಲಿನಲ್ಲಿ ಕಾರ್ಯಕ್ರಮದ ನಿರ್ದೇಶಕರಾಗಿ ಆಯ್ಕೆಯಾದರು. 2022ನೇ ಸಾಲಿನಲ್ಲಿ 2ನೇ ಬಾರಿ ಜೊತೆಕಾರ್ಯದರ್ಶಿಯಾಗಿ ಆಯ್ಕೆಯಾಗಿ ಇದೇ ಅವಽಯಲ್ಲಿ ಸ್ಪೀಚ್ ಕ್ರಾಫ್ಟ್ ನಲ್ಲಿ ಭಾಗವಹಿಸಿ ಔಟ್ ಸ್ಟ್ಯಾಂಡಿಂಗ್ ವಿನ್ನರ್ ಅವಾರ್ಡ್ ಪಡೆದಿದ್ದಾರೆ. 2023ನೇ ಸಾಲಿನಲ್ಲಿ ವ್ಯವಹಾರಿಕ ನಿರ್ದೇಶಕರಾಗಿ ಆಯ್ಕೆಯಾಗಿ,2024ನೆ ಸಾಲಿನಲ್ಲಿ ೩ನೆ ಬಾರಿ ಜೊತೆ ಕಾರ್ಯದರ್ಶಿ ಹುದ್ದೆ ಅಲಂಕರಿಸಿ, 2025ನೆ ಸಾಲಿನಲ್ಲಿ ಘಟಕದ ಉಪಾಧ್ಯಕ್ಷ ಹುದ್ದೆ ಅಲಂಕರಿಸಿದ್ದರು. ರಾಷ್ಟ್ರೀಯ ಉಪಾಧ್ಯಕ್ಷರ ಅಽಕೃತ ಭೇಟಿ ಸಮಯದಲ್ಲಿ ಕಾರ್ಯಕ್ರಮ ಆಯೋಜಿಸಿದ ಹೆಗ್ಗಳಿಕೆ ಇವರದ್ದು.

ಹರ್ಷಿತಾ ಬೆಜ್ಜಂಗಳ:
ಕಾರ್ಯದರ್ಶಿಯಾಗಿ ಆಯ್ಕೆಯಾದ ಹರ್ಷಿತಾ ಬೆಜ್ಜಂಗಳ ರವರು ಪುತ್ತೂರಿನ ನಂದಿಲ ನಿವಾಸಿಯಾಗಿದ್ದು, ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಾಧ್ಯಾಪಕ ಡಾ| ರಾಜೇಶ್ ಬೆಜ್ಜಂಗಳ ರವರ ಪತ್ನಿ

ಸತೀಶ್ ನಾಯ್ಕ್:
ಕೋಶಾಧಿಕಾರಿಯಾಗಿ ಆಯ್ಕೆಯಾದ ಸತೀಶ್ ನಾಯ್ಕ್ ರವರು ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಅಮ್ಮುಂಜ ನಿವಾಸಿ.


ದೀಕ್ಷಿತಾ ಎ.ಸಿ:
ಸಂಪ್ಯ ನಿವಾಸಿಯಾಗಿರುವ ದೀಕ್ಷಿತಾ ಎ.ಸಿ. ಇವರು ಜ್ಯೂನಿಯರ್ ಜೇರ್ ಪರ್ಸನ್ ಆಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here