







ಪುತ್ತೂರು: ಸವಣೂರು ಗ್ರಾಮ ದೈವ ಶಿರಾಡಿ ಮಾಲೆತ್ತಾರು ಇದರ ಸಮಿತಿಯಿಂದ ಜ.18ರಂದು ಸಂಜೆ 4.30ಕ್ಕೆ ಸವಣೂರು ವಿಷ್ಣುಮೂರ್ತಿ ದೇವಸ್ಥಾನ ಇದರ ವಠಾರದಲ್ಲಿ ತುರ್ತು ಸಭೆ ಕರೆಯಲಾಗಿದೆ. ಈ ಸಭೆಗೆ ಗ್ರಾಮದ ಎಲ್ಲಾ ಮನೆಯಿಂದ ಒಬ್ಬ ವ್ಯಕ್ತಿ ಕಡ್ಡಾಯವಾಗಿ ಬರಬೇಕು. ಇನ್ನು ಮುಂದೆ ಗ್ರಾಮದಲ್ಲಿ ನಡೆಯುವ ನೆಮೋತ್ಸವದ ಬಗ್ಗೆ ಸಲಹೆ ಸೂಚನೆ ನೀಡಬೇಕಾಗಿ ಸಮಿತಿಯ ಪ್ರಕಟನೆ ತಿಳಿಸಿದೆ.











